Wednesday, January 22, 2025

ಕುಂದಾಪುರದ ನಿರ್ದೇಶಕರಿಂದ ‘ಹನುಮಂತ’ನ ಹೊಸ ಸಿನಿಮಾ..!

ಉಡುಪಿ: ಲಕ್, ಚಾನ್ಸ್ ಅಂದ್ರೆನೇ ಹಾಗೆ ಅದು ಸಿಕ್ರೆ ಬಂಪರ್ ಖಂಡಿತಾ. ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಬಿಡಬಹುದು. ಈ ಲಕ್​ ಜೊತೆ ಒಂದಿಷ್ಟು ಪ್ರತಿಭೆ ಸೇರಿದ್ರೆ ಹಳ್ಳಿ ಪ್ರತಿಭೆ ದಿಲ್ಲಿಯಲ್ಲಿ ಮಿಂಚಬಹುದು. ಇದಕ್ಕೆ ಕರುನಾಡಿನ ಹಾರ್ಟು ಕದ್ದ ಹನುಮಂತ ಅವರೇ ಸಾಕ್ಷಿ. ಹನುಮ ಸಿಲ್ವರ್ ಸ್ಕ್ರೀನ್​ಗೆ ಅಪ್ಪಳಿಸಲು ಸಿದ್ಧವಾಗಿದ್ದಾರೆ.

ದೇಸಿ ಸ್ಟೈಲ್ ಹಾಡು ಹೇಳಿ ಜನರನ್ನು ಮೋಡಿ ಮಾಡಿರೋ ಹನುಮಂತ ಮತ್ತೆ ಸುದ್ದಿಯಾಗ್ತಿದ್ದಾರೆ. ನಮ್ ಹನುಮಣ್ಣನ ಜೀವನಗಾಥೆ ಸಿನೆಮಾ ಆಗ್ತಾ ಇದೆ. ಸಿಟಿಯನ್ನೇ ನೋಡದ ಹನುಮಂತ, ಕರುನಾಡ ಕಣ್ಮಣಿ ಆಗಿದ್ದನ್ನ ಬೆಳ್ಳಿ ತೆರೆ ಮೇಲೆ ನೋಡಿ ಸೀಟಿ ಹೊಡಿಯೋಕೆ ನಾವು ರೆಡಿಯಾಗಬೇಕಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಸಂದೇಶ್ ಶೆಟ್ಟಿ ಆಜ್ರಿ ಹನುಮಂತನ ಚಿತ್ರಕ್ಕೆ ನಿರ್ದೇಶಕ. ಈ ಹಿಂದೆ ‘ಕತ್ತಲೆ ಕೋಣೆ’ ಎಂಬ ಹಾರರ್ ಕಂ ಸಸ್ಪೆನ್ಸ್ ಮೂವಿಯನ್ನು ಸಂದೇಶ್ ಶೆಟ್ಟಿ ನಿರ್ದೇಶಿಸಿದ್ದರು. ಸಾಮಾಜಿಕ ಪಿಡುಗಿನ ಕುರಿತಾದ ಸಂದೇಶ್ ಶೆಟ್ಟಿ ಚಿತ್ರ ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಹನುಮನ ಚರಿತ್ರೆ ಬರೆಯೋಕೆ ಶುರು ಮಾಡಿದ್ದಾರೆ. ಸ್ವತಃ ಹನುಮಂತಣ್ಣನ ಜೊತೆ ಸಂದೇಶ್ ಶೆಟ್ಟಿಯದ್ದು ಒಂದು ಸಿಟ್ಟಿಂಗ್ ಆಗಿದೆ. ಕಥೆ ಕೇಳಿರುವ ಹನುಮಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನಂತೆ.

ಒಂದೂವರೆ ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಆಗ್ತಾ ಇದೆ. ತಸ್ಮಯ್ ಪ್ರೊಡಕ್ಷನ್ ನಂಬರ್ 2 ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಮತ್ತು ಪವಿತ್ರ ದಂಪತಿ ಈ ಚಿತ್ರಕ್ಕೆ ದುಡ್ಡು ಹಾಕ್ತಾ ಇದ್ದಾರೆ. ಈ ಮಳೆಗಾಲ ಮುಗಿದ ಕೂಡಲೇ ಶೂಟಿಂಗ್ ಶುರುವಾಗಲಿದ್ದು, ಹನುಮಂತ ಅವರ ಹುಟ್ಟಿನಿಂದ ಸರಿಗಮಪ ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗೋ ತನಕದ – ಆ ನಂತರದ ಕಥೆ ಚಿತ್ರಕಥೆಯಾಗ್ತಾ ಇದೆ. ಹನುಮಂತ ಅವರ ಊರು ಹಾವೇರಿಯ ಸುತ್ತಮುತ್ತಲೇ ಶೂಟಿಂಗ್ ನಡೆಯುತ್ತೆ. ಚಿತ್ರಕ್ಕೆ 8 ಟೈಟಲ್ ಗಳನ್ನು ಬರೆದಿರುವ ನಿರ್ದೇಶಕ ಸಂದೇಶ್ ಶೆಟ್ಟಿ ಒಂದನ್ನು ಫೈನಲ್ ಮಾಡಲಿದ್ದಾರೆ. ಹನುಮಂತನ ಪಾತ್ರಕ್ಕೆ ಯುವಕನಿಗಾಗಿ ಹುಡುಕಾಡುತ್ತಿರುವ ನಿದೇಶಕರು, ಹಾವೇರಿ- ಕೊಪ್ಪಳದ ಯುವಕನೊಬ್ಬನಿಗೆ ಅವಕಾಶ ಕೊಡಲಾಗುವುದು ಎಂದು ಹೇಳಿದ್ದಾರೆ. ಹಾವೇರಿಗೆ ಹೋಗಿ ಒಂದು ವಾರ ಹನುಮಂತ ಅವರ ಜೊತೆ ಇರಲಿರುವ ನಿರ್ದೇಶಕ ಸಂದೇಶ್ ಶೆಟ್ಟಿ, ಹನುಮಂತ ಅವರ ಜೀವನ, ಮ್ಯಾನರೀಸಂ- ಹಳ್ಳಿಯ ವಾತಾವರಣವನ್ನು ಅಧ್ಯಯನ ಮಾಡಲಿದ್ದಾರೆ.

ಈಗಾಗಲೇ ಗಾಯಕ ಮೆಹಬೂಬ್ ಸಾಬ್‌ಗೆ ಮೊದಲ ಬಾರಿಗೆ ಸಿನೆಮಾದಲ್ಲಿ ಅವಕಾಶ ನೀಡಿದ ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿಯಲ್ಲಿ ಈಗ ಮತ್ತೊಬ್ಬ ಸಿಂಗರ್​ಗೆ ಅವಕಾಶ ನೀಡಲಿದ್ದಾರೆ. ಸೀದಾ ಸಾದಾ ಹೈಳಿ ಹೈದನಾಗಿ, ಸಂಗೀತದ ಮೂಲಕ ಮನೆಮಾತಾಗಿರುವ ಹನುಮಂತ ಅವರ ಜೀವನಚರಿತ್ರೆ ಸಿನೆಮಾ ಆಗ್ತಾ ಇರೋದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ.

ಅಶ್ವಥ್ ಆಚಾರ್ಯ, ಉಡುಪಿ

RELATED ARTICLES

Related Articles

TRENDING ARTICLES