Friday, December 27, 2024

ನಾವು ಅಣ್ಣ ತಮ್ಮಂದಿರು ಹೊಡೆದಾಡೋ ಪ್ರಶ್ನೆಯೇ ಇಲ್ಲ: ರೇವಣ್ಣ

ಹಾಸನ: ಕುಮಾರಸ್ವಾಮಿ ಸಿಎಂ ಆಗಿರುವಾಗ ನಾನು ಸಿಎಂ ಆಗುವ ಪ್ರಶ್ನೆ ಎಲ್ಲಿ ಬರುತ್ತೆ..? ನಾವು ಅಣ್ಣ ತಮ್ಮಂದಿರು ಹೊಡೆದಾಡೋ ಪ್ರಶ್ನೆಯೇ ಇಲ್ಲ ಅಂತ ಸಚಿವ ಹೆಚ್​. ಡಿ. ರೇವಣ್ಣ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ, ರೇವಣ್ಣ ಅವರಿಗೆ ಸಿಎಂ ಆಗೋ ಅರ್ಹತೆ ಇದೆ ಎಂಬ ಟ್ವೀಟ್​ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ರೇವಣ್ಣ, “ನಾನು ಸಿದ್ದರಾಮಯ್ಯ ಅಭಿಮಾನಿ, ಅವರು ನನ್ನ ಹಿತೈಷಿ. ನನ್ನ ಮೇಲಿನ ಗೌರವದಿಂದ ಸಿಎಂ ಸ್ಥಾನಕ್ಕೆ ಅರ್ಹ ಅಂತ ಸಿದ್ದರಾಮಯ್ಯ ಹೇಳಿರಬಹುದು. ಸಿದ್ದರಾಮಯ್ಯ ಅಭಿಪ್ರಾಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡೋಕೆ ಹೋಗಲ್ಲ. ನಮ್ಮ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಯಾವ ಹಿನ್ನೆಲೆಯಲ್ಲಿ ಈ ರೀತಿ ಚರ್ಚೆ ಆಗಿದೆಯೋ ಗೊತ್ತಿಲ್ಲ” ಎಂದಿದ್ದಾರೆ.

ಪ್ರಜ್ವಲ್ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, “ಒಮ್ಮೆ ಚುನಾವಣಾ ಅಧಿಕಾರಿ ನಾಮಪತ್ರ ಅಂಗೀಕರಿಸಿದ ಮೇಲೆ ತಿರಸ್ಕಾರ ಮಾಡೋ‌ ಹಾಗಿಲ್ಲ. ಚುನಾವಣಾ ಆಯೋಗದ ನಿರ್ದೇಶನವೇ ಇದೆ. ಆಯೋಗ, ಚುನಾವಣಾ ಅಧಿಕಾರಿಗಳು ಯಾವ ಆಧಾರದ ಮೇಲೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ, ಬೇಕಂತಲೇ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES