Monday, December 23, 2024

ಕುಂದಗೋಳ ಗೆಲುವಿಗೆ ಡಿಕೆಶಿ 5 ಕೋಟಿ ಹೂಡಿಕೆ: ರೇಣುಕಾಚಾರ್ಯ

ಹುಬ್ಬಳ್ಳಿ: ಕುಂದಗೋಳ ಗೆಲ್ಲೋಕೆ ಡಿಕೆಶಿ ಹಣ ಖರ್ಚು ಮಾಡಿದ್ದಾರೆ. ಸಿಎಂ ಆಗೋ ಆಸೆಯಿಂದ ಸಚಿವ ಡಿ. ಕೆ. ಶಿವಕುಮಾರ್​ ದುಡ್ಡು ಚೆಲ್ತಿದ್ದಾರೆ ಅಂತ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ಕುಂದಗೋಳ ಗೆಲ್ಲೋಕೆ ಡಿ.ಕೆ. ಶಿವಕುಮಾರ್​ 5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಕಾಂಗ್ರೆಸ್​ ಮುಖಂಡರು 50 ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರೆ. ಡಿ.ಕೆ. ಶಿವಕುಮಾರ್​ ಬಗ್ಗೆ ನನಗೆ ಅಯ್ಯೋ ಪಾಪ ಅನ್ನಿಸ್ತಿದೆ. ಡಿಕೆಶಿ ಸಿಎಂ ಆಗುವ ಆಸೆಯಿಂದ ದುಡ್ಡು ಚೆಲ್ತಿದ್ದಾರೆ” ಅಂತ ಹೇಳಿದ್ರು.

“ಡಿ.ಕೆ. ಶಿವಕುಮಾರ್ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಎಂ.ಬಿ.ಪಾಟೀಲ್ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಭ್ರಷ್ಟರು” ಅಂತ ಕಾಂಗ್ರೆಸ್​ ಮುಖಂಡರ ವಿರುದ್ಧ ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES