Thursday, January 23, 2025

ನಾನು ಸೇರಿ ಪ್ರತಿಯೊಬ್ಬರಿಗೂ ಸಿಎಂ ಆಗೋ ಆಸೆ ಇದೆ: ಪರಮೇಶ್ವರ್

ಕಲಬುರ್ಗಿ: ನಾನು ಸೇರಿ ಪ್ರತಿಯೊಬ್ಬರಿಗೂ ಸಿಎಂ ಆಗೋ ಆಸೆ ಇದೆ ಅಂತಾ ಡಿಸಿಎಂ ಡಾ.ಜಿ. ಪರಮೇಶ್ವರ್​ ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ರೇವಣ್ಣ ಅರ್ಹ ಎಂಬ ಸಿದ್ದರಾಮಯ್ಯ ಟ್ವೀಟ್​ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಇಂಥ ಹೇಳಿಕೆಗಳು ಕೇವಲ ಸಾಂದರ್ಭಿಕ. ಸದ್ಯಕ್ಕೆ ಹೆಚ್​. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಈಗ ಸಿಎಂ ಯಾರು ಅನ್ನೋ ವಿಚಾರ ಅಪ್ರಸ್ತುತ” ಅಂತ ಹೇಳಿದ್ರು.

ಖರ್ಗೆ ಅವರು ಸಿಎಂ ಆಗ್ಬೇಕಿತ್ತು ಅಂತ ಹೆಚ್​. ಡಿ. ಕುಮಾರಸ್ವಾಮಿ ನಿನ್ನೆ ಟ್ವೀಟ್ ಮಾಡಿದ್ರು. ಸಚಿವ ರೇವಣ್ಣ ಅವರಿಗೂ ಸಿಎಂ ಆಗೋ ಅರ್ಹತೆ ಇದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ರು. ಹೀಗೆ ರಾಜ್ಯದಲ್ಲಿ ಸಿಎಂ ಪಟ್ಟಕ್ಕೆ ಹಲವರು ರೇಸ್​ನಲ್ಲಿರೋ ವಿಚಾರ ಈಗಾಗ್ಲೇ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES