ಹಾಸನ: ಸಚಿವ ರೇವಣ್ಣ ಅವರ ಪುತ್ರ, ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಮಹಾ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ರೇವಣ್ಣ ಅಪೂರ್ಣ ಆಸ್ತಿ ವಿವರ ಸಲ್ಲಿಕೆ ಪ್ರಕರಣದಲ್ಲಿ ಸೂಕ್ತ ಕ್ರಮಕ್ಕೆ ಜಿಲ್ಲಾ ಚುನಾವಣಾ ಆಯೋಗಕ್ಕೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.
ಪಾಲುದಾರಿಕೆ ಕಂಪನಿಗಳ ವ್ಯವಹಾರ ಮುಚ್ಚಿಟ್ಟ ಆರೋಪವನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ನಾಮಪತ್ರ ತಿರಸ್ಕಾರಕ್ಕೆ ಬಿಜೆಪಿ ಅಭ್ಯರ್ಥಿ ಮನವಿ ಮಾಡಿದ್ದರು. ನಾಮಪತ್ರ ತಿರಸ್ಕಾರಕ್ಕೆ ಆಗ ಜಿಲ್ಲಾ ಚುನಾವಣಾಧಿಕಾರಿ ನಿರಾಕರಿಸಿದ್ರು. ಬಿಜೆಪಿ ಅಭ್ಯರ್ಥಿ ಎ.ಮಂಜು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಕಾಂಗ್ರೆಸ್ ನಾಯಕ, ವಕೀಲ ದೇವರಾಜೇಗೌಡ ಕೂಡ ದೂರು ಸಲ್ಲಿಸಿದ್ದರು. ದೂರುಗಳನ್ನು ಆಧರಿಸಿ ಕ್ರಮಕ್ಕೆ ಚುನಾವಣಾ ಆಯೋಗದ ನಿರ್ದೇಶನ ನೀಡಿದೆ.