ಮಂಡ್ಯ: ಅಂಬರೀಶ್ ಸಾವನ್ನು ಬ್ರಹ್ಮಾಸ್ತ್ರ ಮಾಡಿಕೊಂಡರು. ಪತಿ ಕಳೆದುಕೊಂಡ ಹೆಣ್ಮಗಳನ್ನು ಚುನಾವಣೆಗೆ ನಿಲ್ಲಿಸಿದ್ರು. ನಿಮ್ಮಲ್ಲೇ ಒಬ್ಬರನ್ನು ನಿಲ್ಲಿಸಿದ್ರೆ ಮಾತಾಡೋ ನೈತಿಕತೆ ಇತ್ತು ಅಂತ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಚಲುವರಾಯಸ್ವಾಮಿ, ಬಂಡಿಸಿದ್ದೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ದೋಸ್ತಿ ನಾಯಕರ ವಾಕ್ಸಮರ ಮುಂದುವರಿದಿದ್ದು, ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, “ದೊಡ್ಡ ಸಾಧನೆ ಮಾಡಿದವರ ಥರ ಈಗ ಒಡಾಡ್ತಿದ್ದಾರೆ. ನೀವು ಮಾಡಿದ ದ್ರೋಹವನ್ನು ಜನ ಇನ್ನೂ ಮರೆತಿಲ್ಲ. ಅಭಿವೃದ್ಧಿ, ಅನುಕಂಪದ ನಡುವೆ ಚುನಾವಣೆ ನಡೆದಿದೆ. ಮಂಡ್ಯದ ಜನ ಅಭಿವೃದ್ಧಿ ಪರವಾಗಿದ್ದಾರೆಂದು ಭಾವಿಸಿದ್ದೇನೆ” ಎಂದಿದ್ದಾರೆ.