Monday, December 23, 2024

ನಮೋ ಭಕ್ತರಿಗೆ ಶುಭ ಹಾರೈಸಿದ್ರು ಪ್ರಿಯಾಂಕಾ..!

ಇಂದೋರ್​: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ತಮ್ಮ ವಾಹನ ನಿಲ್ಲಿಸಿ ಬಿಜೆಪಿ ಕಾರ್ಯಕರ್ತರಿಗೆ ಶುಭ ಹಾರೈಸಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸ್ತಿರೋ ಪ್ರಿಯಾಂಕ ಏರ್​​ಪೋರ್ಟ್​ನಿಂದ ಬರುತ್ತಿದ್ದ ವೇಳೆ ದಾರಿ ಮಧ್ಯೆ ಪ್ರಧಾನಿ ಮೋದಿ ಬೆಂಬಲಿಗರ ಕೈ ಕುಲುಕಿದ್ದಾರೆ.

ಪ್ರಿಯಾಂಕಾ ಬಂದ ದಾರಿ ಮಧ್ಯೆ ‘ಮೋದಿ ಮೋದಿ’ ಅಂತ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ಸಂದರ್ಭ ತಮ್ಮ ಕಪ್ಪು ಬಣ್ಣದ ಟಾಟಾ ಸಫಾರಿ ಎಸ್​ಯುವಿ ವಾಹನ ನಿಲ್ಲಿಸಿದ ಪ್ರಿಯಾಂಕ ಕೆಳಗಿಳಿದು ಬಂದು ನಮೋ ಬೆಂಬಲಿಗರಿಗೆ ಶುಭ ಹಾರೈಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಕೈ ಕುಲುಕಿದ ಪ್ರಿಯಾಂಕಾ ವಾದ್ರಾ, “ನೀವೆಲ್ಲಿದ್ದೀರೋ ಅಲ್ಲೇ ಇದ್ದೀರಿ, ನಾನೆಲ್ಲಿರಬೇಕೋ ಅಲ್ಲಿದ್ದೀನಿ. ಆಲ್​ ದಿ ಬೆಸ್ಟ್​” ಅಂತ ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಪ್ರಿಯಾಂಕಾ ಭರ್ಜರಿ ರೋಡ್​ ಶೋ ನಡೆಸುತ್ತಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್​ ಹಾಗೂ ಛತ್ತೀಸ್​ಗಡ ಸಿಎಂ ಭೂಪೇಶ್ ಭಗೆಲ್ ಸಾಥ್​ ನೀಡಿದ್ದಾರೆ. ಅದಕ್ಕೂ ಮುನ್ನ ರತ್ಲಾಂನಲ್ಲೂ ಪ್ರಚಾರ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES