Monday, December 23, 2024

ಉಪಸಮರಕ್ಕೆ ಭರ್ಜರಿ ಪ್ರಚಾರ – 17ರ ತನಕ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸಿದ್ದರಾಮಯ್ಯ..!

ಹುಬ್ಬಳ್ಳಿ: ಕುಂದಗೋಳ ಉಪಸಮರದ ಅಖಾಡ ರಂಗೇರಿದ್ದು, ಇಂದು ಉಭಯ ನಾಯಕರಿಂದ ಭರ್ಜರಿ ಮತಬೇಟೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದಿನಿಂದ ಫೀಲ್ಡಿಗಿಳಿಯಲಿದ್ದಾರೆ. 17 ನೇ ತಾರೀಕಿನವರೆಗೂ ಕುಂದಗೋಳದಲ್ಲೇ ವಾಸ್ತವ್ಯ ಹೂಡಲಿದ್ದು, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್‌ಶೋ ಮಾಡಲಿದ್ದಾರೆ. ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿದ್ದಾರೆ. ಬಿಜೆಪಿ ಪಾಳಯದಲ್ಲೂ ಚುನಾವಣಾ ಪ್ರಚಾರದ ಭರಾಟೆ ಗರಿಗೆದರಿದ್ದು, ಬಿ.ಶ್ರೀರಾಮುಲು ಹಾಗೂ ಅರವಿಂದ ಲಿಂಬಾವಳಿ ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES