ಮಂಡ್ಯ: ಬಿಜೆಪಿಯಿಂದ ನಾರಾಯಣಗೌಡ 10 ಕೋಟಿ ರೂಪಾಯಿ ಪಡೆದಿದ್ದಾರೆ ಅಂತ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಸೇಲ್ ಆಗಿರೋದಾಗಿ ಆರೋಪಿಸಿದ ಅವರು, “ಬಿಜೆಪಿ ಉಳಿದ ಹಣ ನೀಡಿದ ಬಳಿಕ ಮುಂಬೈಗೆ ಹೋಗ್ತಾರೆ. ಕೆ.ಆರ್.ಪೇಟೆ ಪುರಸಭೆ ಚುನಾವಣೆಗೂ ನಾರಾಯಣಗೌಡ ಇರಲ್ಲ. ಫಲಿತಾಂಶ ಬಳಿಕ ಬಿಜೆಪಿಯವ್ರು ಎತ್ತಾಕ್ಕೊಂಡು ಹೋಗ್ತಾರೆ. ಈ ಬಗ್ಗೆ ಜೆಡಿಎಸ್ನವರಿಗೂ ಎಲ್ಲಾ ಮಾಹಿತಿ ಗೊತ್ತಿದೆ. ಬಿಜೆಪಿ ಮೂಲದಿಂದಲೇ ನನಗೆ ಈ ಮಾಹಿತಿ ಲಭ್ಯವಾಗಿದೆ. ಜೆಡಿಎಸ್ ಶಾಸಕ ನಾರಾಯಣಗೌಡ ಹುಟ್ಟು ಗೂಂಡಾ. ಅವನ ಚರಿತ್ರೆ ತಿಳಿಯಬೇಕಾದ್ರೆ ಮುಂಬೈಗೆ ಹೋಗಬೇಕು” ಎಂದಿದ್ದಾರೆ.