ಬೆಂಗಳೂರು : ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ ಅಂತ ಮಾಜಿ ಮುಖ್ಯಮಂತ್ರಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ವಿಶ್ವನಾಥ್ ಇಂಥಾ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಮೊದಲು ಜಿಟಿಡಿ, ಈಗ ವಿಶ್ವನಾಥ್, ಮುಂದೆ ಯಾರೋ ಗೊತ್ತಿಲ್ಲ. ಬೇಜವಾಬ್ದಾರಿ ಹೇಳಿಕೆ ಬಗ್ಗೆ ಜೆಡಿಎಸ್ ವರಿಷ್ಠರು ಗಮನಹರಿಸಬೇಕು. ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ ಎಂದು ಕಿಡಿಕಾರಿದ್ದಾರೆ.
”ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಅನ್ನೋ ಕೆಲವು ಕಾಂಗ್ರೆಸ್ ಶಾಸಕರ ಕೋರಸ್ ಚಮಚಗಿರಿ ಅಷ್ಟೇ. ಈ ಚೇಷ್ಟೆಯ ವರ್ತನೆಯನ್ನು ಅವ್ರು ನಿಲ್ಲಿಸಬೇಕು. ಸಿದ್ದರಾಮಯ್ಯ ಜನಪರ ಸಿಎಂ ಆಗಿರಲಿಲ್ಲ. ಅವರ ಆಡಳಿತದಲ್ಲಿ ವಿಶೇಷತೆ ಏನಿದೆ? ಅವರು ಅರಸು ಅವರಿಗಿಂತಾ ಗ್ರೇಟಾ?” ಅಂತ ವಿಶ್ವನಾಥ್ ಹೇಳಿದ್ದರು.
ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ : ಸಿದ್ದರಾಮಯ್ಯ
TRENDING ARTICLES