ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಸಿದ್ದರಾಮಯ್ಯಗೆ ಧಮ್ ಇದ್ರೆ ಆರ್ಎಸ್ಎಸ್ ನವರೇ ಗಾಂಧಿಯನ್ನು ಕೊಂದಿದ್ದು ಅಂತ ಸಾಭೀತುಪಡಿಸಲಿ. ಆ ಹೇಳಿಕೆಯನ್ನು ಸಾಬೀತು ಮಾಡಲಿ” ಎಂದರು.
‘ನೀನು ಏಕವಚನ ಬಳಸಿದ್ದಕ್ಕೆ ನಾನು ಏಕವಚನ ಬಳಸಿದ್ದೇನೆ. ನೀನು ತಿದ್ದುಕೊಂಡು ಬದಲಾದರೆ, ಒಳಿತು, ಇಲ್ಲವಾದರೆ, ನಿನ್ನ ಮೇಲೆ ಇದೇ ರೀತಿ ಪದ ಪ್ರಯೋಗ ಮುಂದುವರೆಯಲಿದೆ. ತನ್ನ ಕ್ಷೇತ್ರ ಗೆಲ್ಲಲಾಗದ ಅಯೋಗ್ಯನ ಬಗ್ಗೆ ಈ ರೀತಿ ಏಕ ವಚನ ಬಳಸಿದ್ದಕ್ಕೆ ಕ್ಷಮೆ ಕೋರುತ್ತನೆ’ ಅಂತ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಒಬ್ಬ ಮಾಜಿ ಮುಖ್ಯಮಂತ್ರಿ ಸ್ವಭಾವ ಹೇಗಿರಬೇಕು. ತನ್ನ ಕ್ಷೇತ್ರವನ್ನ ಗೆಲ್ಲಲು ಆಗದವ, ಮೂರು ಬಾರಿ ಸಿಎಂ ಆಗಿ, ಪ್ರಧಾನಿ ಆದವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಕಿಡಿಕಾರಿದ್ರು.
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಆಯನೂರು ವಾಗ್ದಾಳಿ..!
TRENDING ARTICLES