Monday, December 23, 2024

ಕಾಂಗ್ರೆಸ್​ ಮುಖಂಡರ ಕಣ್ಣೀರು ನಾಟಕ: ಈಶ್ವರಪ್ಪ

ಹುಬ್ಬಳ್ಳಿ: ಕುಂದಗೋಳದಲ್ಲಿ ಕಣ್ಣೀರು ಹಾಕಿ ಕಾಂಗ್ರೆಸ್​ ಮುಖಂಡರು ನಾಟಕ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಕಣ್ಣೀರು ಹಾಕಿದ್ರೆ ಮತ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ ಅಂತ ಮಾಜಿ ಡಿಸಿಎಂ ಈಶ್ವರಪ್ಪ ಹುಬ್ಬಳ್ಳಿ ಕಾಂಗ್ರೆಸ್​ ನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಕುಂದಗೋಳ ಉಪಚುನಾವಣೆಗೆ ಸಂಬಂಧಿಸಿ ನಿನ್ನೆ ಸಚಿವ ಡಿ. ಕೆ. ಶಿವಕುಮಾರ್ ಪ್ರಚಾರ ನಡೆಸುವಾಗ ದಿ. ಸಿ. ಎಸ್ ಶಿವಳ್ಳಿ ಅವರನ್ನು ನೆನೆದು ಕಣ್ಣೀರಿಟ್ಟಿದ್ದರು. ಈ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯಿಸಿ, “ಲೋಕಸಭೆ ಮತ್ತು ಉಪ ಸಮರದಲ್ಲಿ ಹಲವು ದೋಸ್ತಿ ಮುಖಂಡರು ಕಣ್ಣೀರು  ಹಾಕ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಡಿ.ಕೆ. ಶಿವಕುಮಾರ ಅವರೂ ಕಣ್ಣೀರು ಹಾಕಿದ್ದಾರೆ. ಮುಂದೆ ಸಿದ್ಧರಾಮಯ್ಯ ಕೂಡ ಕಣ್ಣೀರು ಹಾಕಬಹುದು” ಎಂದು ಲೇವಡಿ ಮಾಡಿದ್ದಾರೆ.

ಕುಂದಗೋಳ ಹಾಗೂ ಚಿಂಚೋಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಅಲೆ ಇದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES