Thursday, January 23, 2025

‘ಸಿದ್ದರಾಮಯ್ಯ ಸಿಎಂ ಆಗಲ್ಲ, ರಾಹುಲ್​​ ಮದುವೆಯಾಗಲ್ಲ’..!

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಕ್ಷೇತ್ರ ರಂಗೇರಿದ್ದು ಮೈತ್ರಿ ನಾಯಕರು, ಬಿಜೆಪಿ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಸಚಿವ ಡಿ. ಕೆ. ಶಿವಕುಮಾರ್​ ಕುಸುಮಾ ಶಿವಳ್ಳಿ ಪರ ಪ್ರಚಾರ ನಡೆಸುತ್ತಿದ್ದು, ಈಶ್ವರಪ್ಪ ಅವರೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.

ಪ್ರಚಾರದ ಸಂದರ್ಭ ಮಾತನಾಡಿದ ಅವರು, “ಸಿದ್ದರಾಮಯ್ಯ ಸಿಎಂ ಆಗಲ್ಲ, ರಾಹುಲ್ ಮದ್ವೆಯಾಗಲ್ಲ ಅಂತ ಹೇಳಿದ್ದಾರೆ. ಕುಂದಗೋಳದಲ್ಲಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಚಿಕ್ಕನ ಗೌಡ ಪರ ಪ್ರಚಾರ ನಡೆಸಿ ಮಾತನಾಡಿ, “ಮೇ 23ರ ಬಳಿಕ ಮೈತ್ರಿ ಸರ್ಕಾರ ಪತನವಾಗುತ್ತದೆ. ಕುಮಾರಣ್ಣ ಎಲ್ಲಿದ್ದೀಯಪ್ಪಾ ಎನ್ನುವ ಕಾಲ ಹತ್ತಿರವಿದೆ. ಸ್ವತಃ ಸಿದ್ದರಾಮಯ್ಯನವರೇ ಆ ರೀತಿ ಕೇಳ್ತಾರೆ” ಅಂತ ಈಶ್ವರಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES