Wednesday, January 22, 2025

ರಮೇಶ್ ಜಾರಕಿಹೊಳಿಗೆ ಸರ್ಕಾರದ ಬಗ್ಗೆ ಏನೂ ಐಡಿಯಾ ಇಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ಕೆಂಪುಗೂಟದ ಕಾರು ನಿಷೇಧವಾಗಿರೋದು ರಮೇಶ್ ಜಾರಕಿಹೊಳಿಗೆ ಗೊತ್ತಿಲ್ಲ. ಸರ್ಕಾರದ ಬಗ್ಗೆ ಏನೂ ಐಡಿಯಾ ಇಲ್ಲ ಅಂತ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, “ಚುನಾವಣಾ ಫಲಿತಾಂಶ ಬರಲಿ. ಮೇ 23ರ ನಂತರ ಕೆಂಪುಗೂಟದ ಕಾರಲ್ಲಿ ಓಡಾಡೋರು ಮಾಜಿ ಆಗ್ತಾರೆ” ಅನ್ನೋ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. “ಲೋಕ ಸಮರದ ನಂತರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುವುದು ಖಚಿತ. 2014 ರಲ್ಲಿ ಬಂದ ಸಂಖ್ಯಾಬಲ ಬಿಜೆಪಿಗೆ ಬಂದ್ರೆ, ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡ್ತಾರೆ. ರಮೇಶ ಜಾರಕಿಹೊಳಿಗೆ ಕೆಂಪು ಗೂಟದ ಕಾರ್, ಸರ್ಕಾರ ಏನೂ ಐಡಿಯಾ ಇರಲ್ಲ. ಕೆಂಪು ದೀಪ ನಿಷೇಧವಾಗಿರೋದು ಗೊತ್ತಿಲ್ಲ ಅನಿಸುತ್ತೆ. ಅವನಿಗೆ ಏನೂ ಗೊತ್ತಿರೋದಿಲ್ಲ. ಗೊತ್ತಿಲ್ದೆ ಮಾತಾಡ್ತಾನೆ. ಅಧಿಕಾರ ಹೋದವರು ಮಾಜಿ ಆಗೇ ಆಗ್ತಾರೆ” ಎಂದಿದ್ದಾರೆ.

RELATED ARTICLES

Related Articles

TRENDING ARTICLES