Thursday, January 23, 2025

ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಪಕ್ಷ ಬೆಳೆಸ್ತಾರ ಅಂದ್ರು ರೆಬೆಲ್​ ಶಾಸಕರು..!

ಬೆಂಗಳೂರು: ಮಂಡ್ಯದಲ್ಲಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್​ ಪಕ್ಷವನ್ನ ಬೆಳೆಸ್ತಾರಾ..? ನಾವೇ ತಾನೇ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸಬೇಕು. ಹೀಗಾಗಿ ಜೆಡಿಎಸ್​ನಿಂದ ಮೊದಲಿಂದ ದೂರ ಇದ್ದೇವೆ ಅಂತ ರೆಬೆಲ್ ನಾಯಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

ರೆಬೆಲ್ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಜತೆ ಡಿನ್ನರ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಚೆಲುವರಾಯಸ್ವಾಮಿ ಶುಕ್ರವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ, ” ಪಕ್ಷ ಬೆಳೆಸುವುದಕ್ಕಾಗಿ ಜೆಡಿಎಸ್​ನಿಂದ ದೂರವಿದ್ದೇವೆ. ಅದನ್ನು ನಿಮ್ಮ ಗಮನಕ್ಕೂ ತಂದಿದ್ದೇವೆ. ನಾವೇನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದ್ದೆವು. ಅದನ್ನೇ ಮುಂದುವರೆಸಿದ್ದೇವೆ ಅಷ್ಟೇ” ಅಂತ ರೆಬೆಲ್ ನಾಯಕರು ದಿನೇಶ್ ಗುಂಡೂರಾವ್​ಗೆ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES