Monday, December 23, 2024

ನಾನು ಕಾಂಗ್ರೆಸ್ ವಕ್ತಾರನಲ್ಲ ಅಂತ ಡಿಕೆಶಿ ಹೇಳಿದ್ದೇಕೆ..?

ಬೆಂಗಳೂರು: ನಾನು ಕಾಂಗ್ರೆಸ್ ವಕ್ತಾರನಲ್ಲ. ಕೇವಲ ಸಚಿವ ಅಂತ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್​ ಹೇಳಿದ್ದಾರೆ. ಮೈಸೂರಿನಲ್ಲಿ ಸಚಿವ ಜಿ. ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ಕೆಳಿದ ಮಾಧ್ಯಮಗಳಿಗೆ ಡಿಕೆಶಿ ಈ ರೀತಿ ಉತ್ತರಿಸಿದ್ದಾರೆ. “ನಾನು ಕಾಂಗ್ರೆಸ್​ ವಕ್ತಾರನಲ್ಲ, ಕೇವಲ ಸಚಿವ. ನನ್ನ ವಿಷಯಕ್ಕೆ ಮಾತ್ರ ನಾನು ಪ್ರತಿಕ್ರಿಯೆ ನೀಡಬಲ್ಲೆ. ಬೇರೆಯವರ ವಿಷಯಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್​ ಕಾರ್ಯಕರ್ತರೇ ಬಿಜೆಪಿಗೆ ಮತ ಹಾಕಿಸಿದ್ದಾರೆ. ಇಲ್ಲದಿದ್ದರೆ ಬಿಜೆಪಿ ರಾಜ್ಯದಲ್ಲಿ ಎಲ್ಲೂ ಗೆಲ್ಲುತ್ತಿರಲಿಲ್ಲ ಅಂತ ಸಚಿವ ಜಿ. ಟಿ. ದೇವೇಗೌಡರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES