ತುಮಕೂರು : ಮೇ.23ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀರಲಿದೆ. ಈ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಮುಖ್ಯಮಂತ್ರಿ ಸ್ಥಾನ ಕುಮಾರಸ್ವಾಮಿ ಅವರ ‘ಕೈ’ ತಪುತ್ತೆ ಎಂದು ಹೇಳಲಾಗುತ್ತಿದೆ. ಹಿಗೊಂದು ಚರ್ಚೆಗೆ ಗ್ರಾಸವಾಗಿರೋದು ತುಮಕೂರು ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸಂಚಾಲಕ ದರ್ಶನ್ ಕಾರ್ಯಕರ್ತರೊಬ್ಬರ ಜೊತೆ ನಡೆಸಿರೋ ಸಂಭಾಷಣೆ…!
ದರ್ಶನ್ ಮತ್ತು ಕಾರ್ಯಕರ್ತರೊಬ್ಬರು ನಡೆಸಿದ ಸಂಭಾಷಣೆಯಲ್ಲಿ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎನ್ ರಾಜಣ್ಣ ನಾಮಪತ್ರ ವಾಪಸ್ ಪಡೆಯಲು ಕೋಟಿ ಕೋಟಿ ಹಣ ಪಡೆದಿದ್ದಾರೆ ಅನ್ನೋ ಆರೋಪವಿದೆ. ಅದಲ್ಲದೆ ತುಮಕೂರಲ್ಲಿ ದೇವೇಗೌಡರು ಗೆದ್ದರೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಪರಮೇಶ್ವರ್ ಅವರಿಗೆ ಪಟ್ಟ ಕಟ್ಟಲಾಗುತ್ತದೆ ಎಂದು ಸಂಭಾಷಣೆಯಲ್ಲಿದೆ.
ಆ ಸಂಭಾಷಣೆಯಲ್ಲಿ ಏನಿದೆ?
ದರ್ಶನ್: ನಮ್ ಸಾಹೇಬ್ರು ಸಿಎಂ ಆಗೋದಿಕ್ಕಾ.. ಅಲ್ಲಿ ಕೆಲವೊಂದು ಈಗ ಕುಮಾರಸ್ವಾಮಿಗೆ ಒಂದು ಅವಕಾಶ ಸಿಕ್ಕಾಗಿದೆ. ಕುಮಾರಸ್ವಾಮಿಗೆ ಹೆಲ್ತ್ ಇಶ್ಯೂಸ್ ಇದೆ.
ಕಾಂಗ್ರೆಸ್ ಕಾರ್ಯಕರ್ತ: ಹಾ..
ದರ್ಶನ್: ಆಮೇಲೆ ಜೆಡಿಎಸ್‌ನಿಂದ ಎಲ್ಲಿ ಅಳೆದು ತೂಗಿದ್ರು ಎಲ್ಲೂ ಸಿಎಂ ಕ್ಯಾಂಡಿಡೇಟ್ ಒಬ್ರೂ ಇಲ್ಲ. ಒಬ್ರ ಹೆಸ್ರು ಹೇಳಿ ಸಾಕು. ಒಬ್ರು. ಆಯ್ತಾ. ರೇವಣ್ಣಗೆ ಡಿಸಿಎಂ ಚಾನ್ಸ್ ಇದೆ. ಸಾಹೇಬ್ರಿಗೆ ಸಿಎಂ ಚಾನ್ಸ್ ಇದೆ. ಅದ್ರಲ್ಲಿ ಇನ್ನೊಂದು. ಇವರಿಗೊಂದು ದೊಡ್ಡ ಹಿರಿಮೆ ಬರುತ್ತೆ ಗೌಡ್ರಿಗೆ. ಒಬ್ಬ ದಲಿತನನ್ನ ಸಿಎಂ ಮಾಡಿದೆ ಅಂತಾ..
ಕಾಂಗ್ರೆಸ್ ಕಾರ್ಯಕರ್ತ: ಅಲ್ಲಾ.. ಅಲ್ಲ ಒಂದು, ಒಂದು, ಈಗ ಸಾಹೇಬ್ರಿಗೆ ಸಿಎಂ ಸಿಗುತ್ತೆ ಅನ್ನೋದ್ರ ಪ್ರಕಾರವಾಗಿ ಹೋದ್ರೆ. ಸಾಹೇಬ್ರು ಸಿಎಂ ಆದ್ರೆ, ಕುಮಾರಸ್ವಾಮಿ ಏನಾಗಿರ್ತಾರೆ.
ದರ್ಶನ್: ಕುಮಾರಸ್ವಾಮಿ ಸಂಪೂರ್ಣ ರೆಸ್ಟ್.. ಕುಮಾರಸ್ವಾಮಿ ಅವ್ರ ಮಾತು.. ಅವ್ರ ಅಳೋದು. ಓಡಾಡೋದು. ಆ ಡಿಪ್ರೆಶನ್. ಇದೆಲ್ಲ ಏನಿದೆ ಗೊತ್ತಾ. ಸೀ ಎಲ್ಲಿಂದನೋ ದೇವೇಗೌಡ್ರಿಗೆ ಆ ಕುಟುಂಬದಿಂದ ಬಂದಿರೋ ಮಾಹಿತಿ. ತುಂಬಾ ನೊಂದಿದ್ದಾರೆ. ಅವರಿಗೆ ಅವರು ಸಿಎಂ ಆಗಬೇಕು ಅನ್ನೋ ಯಾವ ಆಸೆನೂ ಇಲ್ಲ. ಕುಮಾರಸ್ವಾಮಿ ಒಬ್ಬ ಅವಕಾಶವಾದಿ. ದೇವೇಗೌಡ್ರು ಒಬ್ಬ ಸಮಾಜವಾದಿ. ಸೋಶಿಯಲಿಸ್ಟ್ ಆಯ್ತಾ. ಬಟ್ ಈ ಸರತಿ ಬಂದಾಗ್ಲೂ. ಅದು ಅವರಿಗಿಲ್ಲ ಅಂದ್ರೂ ಪಕ್ಷ ಉಳೀಬೇಕು ಅನ್ನೋ ಕಾರಣಕ್ಕೆ ಹೀಗಾಗಿದೆ.
ಕಾಂಗ್ರೆಸ್ ಕಾರ್ಯಕರ್ತ: ಸರಿ.. ಸರಿ..
ಇದು ರಾಜ್ಯ ರಾಜಕಾರಣದ ಸ್ಫೋಟಕ ಸುದ್ದಿ..! ದೊಡ್ಡಗೌಡರು ಕೋಟಿ ಕೋಟಿ ಕೊಟ್ಟಿದ್ದು ಯಾರಿಗೆ?