ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಚೆನ್ನೈಸೂಪರ್ ಕಿಂಗ್ಸ್ನ ನಾಯಕ ಮಹೇಂದ್ರ ಸಿಂಗ್ ಧೋನಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ 2 ಮ್ಯಾಚ್ಗಳಿಂದ ವಿಶ್ರಾಂತಿ ಪಡೆಯೋ ಸಾಧ್ಯತೆ ಇದೆ. ಬೆನ್ನು ನೋವಿನಿಂದಲೇ ಆಡುತ್ತಿರುವ ಮಾಹಿ ಇಂದು ಮುಂಬೈ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾರಥ್ಯದ ಚೆನ್ನೈ ಗೆಲುವಿನ ಕೇಕೆ ಹಾಕಿದರೆ, ಮುಂದಿನ ಎರಡು ಮ್ಯಾಚ್ಗಳಿಂದ ದೂರ ಉಳಿದು ರೆಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ಮುಗಿದ ಬಳಿಕ ಮೇ.30ರಿಂದ ಇಂಗ್ಲೆಂಡ್ನಲ್ಲಿ ವರ್ಲ್ಡ್ಕಪ್ ನಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಟಗಾರರ ವರ್ಕ್ಲೋಡ್ ಅನ್ನು ಗಮನಿಸುತ್ತಿದೆ. ಧೋನಿ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವುದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಎರಡು ಪಂದ್ಯಗಳಲ್ಲಿ ಧೋನಿ ಕಣಕ್ಕಿಳಿಯುವುದು ಡೌಟು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮ್ಯಾಚ್ ಬಳಿಕ ಧೋನಿ ತಮ್ಮ ಬೆನ್ನು ನೋವಿನ ಬಗ್ಗೆ ಮಾತಾಡಿದ್ದರು.
ಇನ್ನು ದಕ್ಷಿಣ ಆಫ್ರಿಕಾದ ವೇಗಿ ಡೇಲ್ಸ್ಟೇನ್ ಐಪಿಎಲ್ನಲ್ಲಿ ಆಡಿದ್ದು ಕೇವಲ ಎರಡೇ ಎರಡು ಮ್ಯಾಚ್ಗಳನ್ನು. ಆದರೆ, ಭುಜದ ನೋವಿನ ಸಮಸ್ಯೆಯಿಂದ ಅವರು ಟೂರ್ನಿಯಿಂದಲೇ ಹೊರಗುಳಿಯಬೇಕಾಗಿದೆ. ಇದು ಸೌತ್ಆಫ್ರಿಕಾಕ್ಕೆ ದೊಡ್ಡ ತಲೆನೋವಾಗಿದೆ. ಐಪಿಎಲ್ ಮತ್ತು ವರ್ಲ್ಕಪ್ ಅಂತ ಬಂದ್ರೆ, ಐಪಿಎಲ್ಗಿಂತಲೂ ವರ್ಲ್ಡ್ಕಪ್ ಮುಖ್ಯವಾಗುವುದರಿಂದ ಧೋನಿ ರೆಸ್ಟ್ ಮಾಡಲೇ ಬೇಕಾಗಿರೋದು ಅನಿವಾರ್ಯವೂ ಹೌದು.
ಧೋನಿ 2 ಮ್ಯಾಚ್ಗಳನ್ನು ಆಡೋದು ಡೌಟ್..! ಕಾರಣ ಏನ್ ಗೊತ್ತಾ?
TRENDING ARTICLES