Wednesday, January 22, 2025

ವಿಷ್ಣುವರ್ಧನ್ ಬಯೋಪಿಕ್​ಗೆ ಸುದೀಪ್ ನಾಯಕ?

ಡಾ. ವಿಷ್ಣುವರ್ಧನ್, ಇದು ಕೇವಲ ಹೆಸರಲ್ಲ.. ಇದೊಂದು ಶಕ್ತಿ…ವಿಷ್ಣು ಅನ್ನೋ ಹೆಸರೇ ಒಂದು ಸ್ಫೂರ್ತಿ. ವಿಷ್ಣು ದಾದಾ ಅಂದ್ರೆ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ದಾನದ ಗಣಿ..! ಕನ್ನಡ ಚಿತ್ರರಂಗದ ಈ ‘ಧಣಿ’ಯ ಬಗ್ಗೆ ತಿಳಿದಷ್ಟು ತಿಳಿದುಕೊಳ್ಳೋದು ಬೆಟ್ಟದಷ್ಟಿದೆ. ಇದು ಸ್ವಲ್ಪಮಟ್ಟಿಗಾದರೂ ಸಾಧ್ಯವಾಗಬೇಕು ಎಂದರೆ ಅವರ ಬಯೋಪಿಕ್ ಬರಬೇಕು.

ಯಸ್, ಡಾ.ರಾಜ್​ಕುಮಾರ್​, ಡಾ.ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್..ಸ್ಯಾಂಡಲ್​​ವುಡ್​ನ ತ್ರಿವಳಿ ರತ್ನಗಳು. ಈ ಮೂವರು ಇಲ್ಲದ ಚಿತ್ರರಂಗ ಇಂದು ಬಡವಾಗಿದೆ ಅಂದರೆ ತಪ್ಪಾಗಲಾರದು. ಆದರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ಈಗನ ಕೆಲವು ಸ್ಟಾರ್ ನಟರು ಹೆಜ್ಜೆ ಇಡುತ್ತಿದ್ದಾರೆ ಅನ್ನೋದು ಖುಷಿ ವಿಚಾರ. ಅದೇನೇ ಇರಲಿ.. ಈ ಮೂವರು ವ್ಯಕ್ತಿತ್ವಗಳಿಗೆ ಸರಿಸಾಟಿ ಯಾರೂ ಇಲ್ಲ. ಇವರು ಬೆಳೆದು ಬಂದ ದಾರಿ, ಬದುಕು ಸವೆಸಿದ ಪರಿ ಸ್ಫೂರ್ತಿ. ಹಾಗಾಗಿ ಇವರ ಜೀವನಗಾಥೆ ಚಿತ್ರವಾಗಬೇಕಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಅನೇಕರ ಬಯೋಪಿಕ್ಗಳು ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಸಿನಿಮಾ ಕೂಡ ತೆರೆಗೆ ಬರಲು ರೆಡಿಯಾಗಿದೆ. ಆದರೆ, ಕನ್ನಡದಲ್ಲಿ ಒಬ್ಬರೇ ಒಬ್ಬ ಸಾಧಕರ ಬಯೋಪಿಕ್ ಇಲ್ಲಿಯವರೆಗೂ ಬಂದಿಲ್ಲ. ಹೀಗಾಗಿ ಸಿನಿಮಾ ರಂಗದ ಮಹಾನ್ ಕಲಾವಿದರ ಯಶೋಗಾಥೆಯೇ ಚಿತ್ರವಾಗೋ ಮೂಲಕ ಸ್ಯಾಂಡಲ್ವುಡ್ನಲ್ಲಿ ಬಯೋಪಿಕ್ ಸಿನಿಮಾಗಳ ಸುಗ್ಗಿ ಕಾಲ ಆರಂಭವಾಗಲಿ ಅನ್ನೋದು ಚಿತ್ರರಸಿಕರ ಆಶಯ.
ಡಾ.ರಾಜ್​​ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಜೀವನಗಾಥೆ ಚಿತ್ರವಾಗುತ್ತದೆ ಅನ್ನೋ ಮಾತು ಬಹುಕಾಲದಿಂದಲೂ ಕೇಳಿಬಂದಿದೆ. ಆದರೆ. ಅದು ಇನ್ನೂ ಈಡೇರಿಲ್ಲ. ಈಗ ವಿಷ್ಣು ದಾದಾ ಅವರ ಬಯೋಪಿಕ್ ಬರಲಿದೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬಂದಿದೆ.

ಹೌದು, ಸಾಹಸಸಿಂಹ, ಸ್ಯಾಂಡಲ್​​ವುಡ್​ನ ‘ಯಜಮಾನ’ ವಿಷ್ಣುವರ್ಧನ್ ಅವರ ಬಯೋಪಿಕ್ ಬರಲಿದೆ ಅನ್ನೋ ಮಾತು ಮತ್ತೆ ದಿಢೀರ್ ಅಂತ ಮುನ್ನೆಲೆಗೆ ಬಂದುಬಿಟ್ಟಿದೆ. ಕನ್ನಡದ ‘ರಾಜಸಿಂಹ’ ವಿಷ್ಣು ಅವರ ಬಯೋಪಿಕ್ ಬಂದರೆ ಅವರ ಪಾತ್ರಕ್ಕೆ ಯಾರು ಸೂಕ್ತ ಆಗ್ತಾರೆ ಅನ್ನೋದು ಬಹುಮುಖ್ಯವಾದ ಪ್ರಶ್ನೆ.
ಸಾಧಕರೊಬ್ಬರ ಜೀವನಗಾಥೆಯನ್ನು ಚಿತ್ರರೂಪಕ್ಕೆ ತರುವಾಗ ಅವರ ಪಾತ್ರಕ್ಕೆ ತಕ್ಕದಾದ ನಟರನ್ನು ಹುಡುಕುವುದು ಬಹುದೊಡ್ಡ ಸವಾಲ್. ಸಾಧಕರ ಸ್ಟೈಲ್ ಅನ್ನು ಪಕ್ಕಾ ಅನುಕರಿಸಲಬಲ್ಲ, ಅದಕ್ಕೊಪ್ಪುವ ಕಲಾವಿದರು ಬೇಕು. ಅಷ್ಟೇ ಅಲ್ಲದೆ ನೇಟಿವಿಟಿಗೆ ಹೊಂದಿಕೊಳ್ಳುವಂತೆಯೂ ಇರಬೇಕು.
ಹೀಗೆ ವಿಷ್ಣು ಅವರ ಬಯೋಪಿಕ್​​ಗೆ ಪಕ್ಕಾ ಸೂಟ್ ಆಗೋ ಆ್ಯಕ್ಟರ್ ಅಂದ್ರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನ್ನೋದಕ್ಕೆ ಬಹುಮತ..! ಸುದೀಪ್ ‘ವಿಷ್ಣುವರ್ಧನ’ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಸುದೀಪ್ ವಿಷ್ಣು ಅವರ ಅಪ್ಪಟ ಅಭಿಮಾನಿಯ ಪಾತ್ರವನ್ನು ಮಾಡಿದ್ದರು. ದಾದಾ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ಕೋಟಿಗೊಬ್ಬ’ ಕೂಡ ಒಂದು. ಇದೇ ಟೈಟಲ್ ಬಳಸಿಕೊಂಡು ‘ಕೋಟಿಗೊಬ್ಬ-2’ ಅನ್ನೋ ಸಿನಿಮಾ ಬಂತು.. ಆ ಸಿನಿಮಾಕ್ಕೆ ನಾಯಕ ಇದೇ ಕನ್ನಡದ ಬಾದ್ಶಾ ಕಿಚ್ಚ ಸುದೀಪ್..! ಸುದೀಪ್ ಅಭಿನಯದ ಈ ಎರಡೂ ಚಿತ್ರಗಳು, ಅಂದ್ರೆ ವಿಷ್ಣುವರ್ಧನ, ಕೋಟಿಗೊಬ್ಬ-2 ಸಖತ್ ಹಿಟ್ ಆಗಿತ್ತು.
ಈಗ ವಿಷ್ಣು ದಾದಾನ ಬಯೋಪಿಕ್ ಬಂದರೆ ಖಂಡಿತಾ ಅವರ ಪಾತ್ರಕ್ಕೆ ನ್ಯಾಯ ಒದಗಿಸೋ ಕೆಲಸವನ್ನು ಕಿಚ್ಚ ಸುದೀಪ್ ಮಾಡುತ್ತಾರೆ ಅನ್ನೋದರಲ್ಲಿ ಡೌಟಿಲ್ಲ.. ಹಾಗಾಗಿ ವಿಷ್ಣು ಬಯೋಪಿಕ್​​ಗೆ ಸುದೀಪ್ ಅವರೇ ಪಕ್ಕಾ ಅನ್ನೋದು ಅಭಿಮಾನಿಗಳು, ಸಿನಿಪಂಡಿತರ ಅಭಿಪ್ರಾಯ ಹಾಗೂ ಒತ್ತಾಸೆ.

RELATED ARTICLES

Related Articles

TRENDING ARTICLES