Tuesday, May 21, 2024

ಏಳು ಮೃತದೇಹಗಳ ರವಾನೆ ಪ್ರಕ್ರಿಯೆ ಪೂರ್ಣ

ಬೆಂಗಳೂರು: ಶ್ರೀಲಂಕಾ ಸರಣಿ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟವರ ಮೂವರ ಮೃತದೇಹ ತರಲು ವ್ಯವಸ್ಥೆ ಮಾಡಲಾಗಿದೆ. ತುಮಕೂರಿನ ರಮೇಶ್, ಅಡಕಮಾರನಹಳ್ಳಿ ಮಾರೇಗೌಡ, ಹಾರೋ ಕ್ಯಾತನಹಳ್ಳಿ ಪುಟ್ಟರಾಜು ಮೃತದೇಹ ತರಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹಗಳನ್ನ ತರುವ ಸಾಧ್ಯತೆ ಇದೆ. ಏಳು ಮೃತದೇಹಗಳ ರವಾನೆಯ ಪ್ರಕ್ರಿಯೆ ಪೂರ್ಣವಾಗಿದ್ದು, ಈಗಾಗಲೇ ನಾಲ್ವರ ಮೃತದೇಹ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಹನುಮಂತರಾಯಪ್ಪ, ರಂಗಪ್ಪ, ಶಿವಕುಮಾರ್, ಲಕ್ಷ್ಮೀನಾರಾಯಣ್, ನಾಗರಾಜ್‌ ರೆಡ್ಡಿ ಮೃತದೇಹ ನಿನ್ನೆಯೇ ಬೆಂಗಳೂರಿಗೆ ತಲುಪಿದೆ.

ಹನುಮಂತರಾಯಪ್ಪ ಅವರ ಮೃತದೇಹ ನಿವಾಸ ತಲುಪಿದ್ದು ದಾಸರಹಳ್ಳಿಯಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2.30ರ ಬಳಿಕ ಸ್ವಗ್ರಾಮ ನೆಲಮಂಗಲದ ಕಾಚನಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

ನಾಲ್ವರ ಮೃತದೇಹ ಏರ್​ಪೋರ್ಟ್​ನಿಂದ ಮೃತ ದೇಹ ಎಂ.ಎಸ್ ರಾಮಯ್ಯ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಇಂದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತೆ. ಈ ಬಗ್ಗೆ ಗೃಹಸಚಿವ ಎಂ.ಬಿ ಪಾಟೀಲ್ ಮಾತಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಜೊತೆ ಸಹ ಮಾತನಾಡಿದ್ದೇನೆ. ಮೃತ ದೇಹಗಳ ಹಸ್ತಾಂತರಕ್ಕೆ ಸಹಕಾರ ನೀಡ್ತಿದ್ದಾರೆ. ಶ್ರೀಲಂಕಾದಲ್ಲಿ ಉತ್ತಮ ವ್ಯವಸ್ಥೆ ಇಲ್ಲ. ದೇಹಗಳನ್ನು ಶೇಖರಿಸಲು ಸರಿಯಾದ ವ್ಯವಸ್ಥೆ ಇಲ್ಲ. ಇನ್ನೂ ನಾಲ್ಕು ಮೃತ ದೇಹಗಳು ಬರಲಿವೆ. ಖುದ್ದು ನಾನೇ ಮುಂದಿನ ಕಾರ್ಯಗಳಲ್ಲಿ ಭಾಗವಹಿಸುವೆ. ಸರ್ಕಾರದಿಂದ ಎಲ್ಲಾ ರೀತಿ ಸಹಕಾರಕ್ಕೆ ಸೂಚನೆ ನೀಡಲಾಗಿದೆ” ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES