ಬೆಳಗಾವಿ: ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡೋದು ಖಚಿತ. ಶೀಘ್ರದಲ್ಲೇ ರಾಜೀನಾಮೆ ದಿನಾಂಕವನ್ನು ಪ್ರಕಟಿಸುವೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕದಲ್ಲಿ ಮತ ಚಲಾಯಿಸಿದ ನಂತರ ಮತಾನಡಿದ ಅವರು, “ನನ್ನ ಸಹೋದರ ಸತೀಶ್ ಜಾರಕಿಹೊಳಿಗೆ ತಲೆ ಕೆಟ್ಟಿದೆ. ಈಗಾಗಲೇ ಒಬ್ಬ ಸಹೋದರನನ್ನು ಹಾಳು ಮಾಡಿದ್ದಾನೆ. ರಾಜೀನಾಮೆ ಕೊಟ್ಟ ಬಳಿಕ ಮುಂದಿನ ನಿರ್ಧಾರ ಮಾಡ್ತೀನಿ ಅಂತ” ಹೇಳಿದ್ದಾರೆ.
“ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ನಾನೊಬ್ಬ ಜಾವಾಬ್ದಾರಿಯುತ ವ್ಯಕ್ತಿಯಾಗಿದ್ದು ನನಗೆ ಎಲ್ಲವೂ ಗೊತ್ತಿದೆ. ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ನಾನಲ್ಲ. ಶಾಸಕ ಸ್ಥಾನದ ಜವಾಬ್ದಾರಿ ಏನೆಂದು ನನಗೂ ಗೊತ್ತಿದೆ. ಲಖನ್ ಜಾರಕಿಹೊಳಿ ಶಾಸಕರಾದ್ರೆ ನನ್ನಷ್ಟು ಸಂತೋಷ ಪಡೋರು ಯಾರೂ ಇಲ್ಲ. ಲಖನ್ ಜಾರಕಿಹೊಳಿಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಲಖನ್ ಜಾರಕಿಹೊಳಿ ಗೋಕಾಕ್ನಲ್ಲಿ ಸ್ಪರ್ಧೆ ಮಾಡಿದ್ರೆ ನನಗೆ ಬೇರೆ ಕ್ಷೇತ್ರಗಳಿವೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ” ಎಂದಿದ್ದಾರೆ.
“ದಳ ಬಿಟ್ಟು ಬಂದವರಿಂದ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ. 1999ರ ನಂತರ ಆಂತರಿಕ ಗೊಂದಲ ಜಾಸ್ತಿಯಾಗಿದ್ದು ಇದೀಗ ತಾರಕಕ್ಕೇರಿದೆ. ಈವರೆಗೆ ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರು ಚರ್ಚೆ ಮಾಡಿಲ್ಲ. ಸಚಿವ ಸತೀಶ ಜಾರಕಿಹೊಳಿಗೆ ತಲೆ ಸರಿಯಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.