Monday, December 23, 2024

ತಾಯಿಯ ಸಾವಿನ ನೋವಲ್ಲೂ ಮತದಾನ ಮರೆಯಲಿಲ್ಲ..!

ಹುಬ್ಬಳ್ಳಿ: ಮಡಿವಾಳ ನಗರ ನಿವಾಸಿಯೊಬ್ಬರು ತಾಯಿ ಸಾವಿನ ನೋವಿನ ನಡುವೆಯೂ ಪತ್ನಿ ಸಮೇತರಾಗಿ ಹೋಗಿ ಮತ ಚಲಾಯಿಸಿ ಮತದಾನದ ಮಹತ್ವವನ್ನು ತಿಳಿಸಿದ್ದಾರೆ. ತಾಯಿ ಸಾವಿನ ನೋವಿನಲ್ಲಿದ್ದರೂ ಮತದಾನವನ್ನು ಮರೆಯದ ಮಗ, ಬೆಳಗ್ಗೆಯೇ ಪತ್ನಿಯನ್ನು ಕರೆದುಕೊಂಡು ಮತಗಟ್ಟೆಗೆ ಬಂದು ಮತಚಲಾಯಿಸಿದ್ದಾರೆ.

ವಿಮಲಾ ನಾಯಕ 89 ಅವರು ಮೃತಪಟ್ಟಿದ್ದು, ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಪುತ್ರ ಸಿ.ಎನ್. ನಾಯಕ ಪತ್ನಿ ಇಂದಿರಾ ಜೊತೆ ಭವಾನಿ ನಗರದ ಮತಗಟ್ಟೆ ಸಂಖ್ಯೆ 110ಕ್ಕೆ ಹೋಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ದೇಶದಲ್ಲಿ ಮೂರನೇ ಹಾಗೂ ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲೆಡೆ ಮತದಾನ ಜಾಗೃತಿ ಮೂಡಿಸಲಾಗ್ತಿದೆ. ಇಂದು 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, 18ರಂದು ನಡೆದ ಮೊದಲನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

RELATED ARTICLES

Related Articles

TRENDING ARTICLES