Saturday, October 26, 2024

ದೇಶದಲ್ಲಿ 3ನೇ, ರಾಜ್ಯದಲ್ಲಿ 2ನೇ ಹಂತದ ಎಲೆಕ್ಷನ್​ , ಎಲ್ಲೆಲ್ಲಿ ಮತದಾನ?

17ನೇ ಲೋಕಸಭಾ ಚುನಾವಣೆಯ ಹಬ್ಬ ಜೋರಾಗಿದೆ. ಇಂದು ದೇಶಾದ್ಯಂತ 3ನೇ ಹಾಗೂ ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. ದೇಶದಲ್ಲಿ 13 ರಾಜ್ಯ, 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 117 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕದ 14, ಗುಜರಾತ್-26, ಕೇರಳ-20, ಮಹಾರಾಷ್ಟ್ರ-14 , ಉತ್ತರ ಪ್ರದೇಶ-10, ಚಂಡೀಗಢ್-7, ಒಡಿಶಾ-6, ಬಿಹಾರ-5, ಅಸ್ಸಾಂ-4, ಗೋವಾ-2, ತ್ರಿಪುರಾ-1, ಜಮ್ಮು-ಕಾಶ್ಮೀರ್-1, ಪಶ್ಚಿಮ ಬಂಗಾಳ-5, ದಿಯು-ದಮನ್‌-1, ದಾದ್ರ ಹವೇಲಿ-1 ಕ್ಷೇತ್ರಗಳಲ್ಲಿ ಇಂದು ಮತಹಬ್ಬ.
ರಾಜ್ಯದ 14 ಕ್ಷೇತ್ರಗಳು : ರಾಜ್ಯದಲ್ಲಿ ಏಪ್ರಿಲ್ 18ರಂದು 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು, ಇಂದು ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆ 14 ಕ್ಷೇತ್ರಗಳು, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ,ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ. ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ 237 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

RELATED ARTICLES

Related Articles

TRENDING ARTICLES