Wednesday, January 22, 2025

ವೋಟ್​ ಮಾಡ್ಲೇ ಬೇಕು ಅಂತ ಹಟ ಹಿಡಿದ್ರು 110ರ ಅಜ್ಜಿ..!

ಬಾಗಲಕೋಟೆ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಜನ ಮತದಾನ ಮಾಡಲಿದ್ದಾರೆ. ಬಾಗಲಕೋಟೆಯಲ್ಲಿ 110 ವರ್ಷದ ಅಜ್ಜಿಯೊಬ್ಬರು ವೋಟ್ ಹಾಕಲೇ ಬೇಕು ಅಂತ ಹಟ ಹಿಡಿದು ಕೊನೆಗೂ ತಮ್ಮ ಹಕ್ಕು ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆಯ ಶತಾಯುಷಿ ಅಜ್ಜಿ 110 ವರ್ಷದ ನಿಂಬೆವ್ವ ಮುಕುಂದ ಅವರು ತೇರದಾಳ ಪಟ್ಟಣದಲ್ಲಿ ಮತ ಚಲಾಯಿಸಿದ್ದಾರೆ. ರಜೆ ಇದ್ದರೂ, ಮತಗಟ್ಟೆ ಸಮೀಪವೇ ಇದ್ರೂ ಮತಹಾಕದೇ ಇರುವವರಿಗೆ ಈ ಅಜ್ಜಿಯೇ ಮಾದರಿ. ಅಂತೂ ಮತ ಹಾಕಲೇಬೇಕೆಂದು ಹಠ ಹಿಡಿದು ಅಜ್ಜಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

RELATED ARTICLES

Related Articles

TRENDING ARTICLES