Friday, January 3, 2025

ವೋಟ್ ಮಾಡೋಕೆ ಬಂದ ವಿದ್ಯಾರ್ಥಿಗಳಿಗೆ ‘ಕೈ’ ಕಾರ್ಯಕರ್ತರಿಂದ ಬೆದರಿಕೆ

ಬಾಗಲಕೋಟೆ: ದೇಶದಲ್ಲಿ ಮೂರನೇ ಹಂತದ ಹಾಗೂ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಯುವ ಜನರು, ಮೊದಲಬಾರಿ ಮತ ಚಲಾಯಿಸುವವರನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಬಾಗಲಕೋಟೆಯಲ್ಲಿ ಮಾತ್ರ ಮತಗಟ್ಟೆ 124ರಲ್ಲಿ ಮತ ಚಲಾಯಿಸಲು ಬಂದ ವಿದ್ಯಾರ್ಥಿಗನ್ನು ಗದರಿ, ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಬಾಗಲಕೋಟೆಯಲ್ಲಿ ವಿದ್ಯಾರ್ಥಿಗಳ ಮತಚಲಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು, ಮತದಾನಕ್ಕೆ ಬಂದ ವಿದ್ಯಾರ್ಥಿಗಳನ್ನು ತಡೆದು ಗದರಿಸಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಬಿವಿವಿ ಸಂಸ್ಥೆಯ ವಿದ್ಯಾರ್ಥಿಗಳನ್ನ ಗದರಿಸಿದ ಕಾರ್ಯಕರ್ತರು, ಮತ ಚಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES