ದಾವಣಗೆರೆ: ದೇಶದಲ್ಲಿ ಮೂರನೇ ಹಂತದ ಮತ್ತು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ದಾವಣಗೆರೆಯಲ್ಲಿ ಮದುವೆ ಗಂಡು ಅರಶಿನ ಶಾಸ್ತ್ರ ಮುಗಿಸಿ ನೇರವಾಗಿ ಮತಗಟ್ಟೆಗೆ ಬಂದಿದ್ದಾರೆ. ಮದುವೆ ಸಂಭ್ರಮದ ನಡುವೆಯೂ ಮತದಾನ ಮಾಡುವುದನ್ನು ಮರೆಯದೆಯೇ ತಮ್ಮ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.
ಮನೆಯಲ್ಲಿ ಅರಿಶಿನ ಶಾಸ್ತ್ರ ಮುಗಿಸಿದ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದ ಯುವಕ ಸಂದೀಪ್ ಸರ್ಕಾರಿ ಪ್ರಾರ್ಥಮಿಕ ಶಾಲೆಗೆ ಬಂದು ಮತ ಚಲಾಯಿಸಿದ್ದಾರೆ. ವರನ ಮತದಾನ ಜಾಗೃತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲನೇ ಹಂತದ ಮತದಾನದ ಸಂದರ್ಬದಲ್ಲಿಯೂ ಹಲವೆಡೆ ಮದುಮಕ್ಕಳು ಬಂದು ಮತ ಚಲಾಯಿಸಿದ್ದರು. ಈಗ ಮತ್ತೊಮ್ಮೆ ದಾವಣಗೆರೆ ಯುವಕ ಅರಿಶಿನ ಶಾಸ್ತ್ರ ಮುಗಿಸಿಕೊಂಡು ಮತ ಚಲಾಯಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ.