Monday, December 23, 2024

ಚರ್ಚ್​ ಮೇಲೆ ಉಗ್ರರ ದಾಳಿ: 49ಕ್ಕೂ ಹೆಚ್ಚು ಸಾವು

ಕೊಲಂಬೋ: ಈಸ್ಟರ್ ಪ್ರಾರ್ಥನೆ ವೇಳೆಯೇ ಶ್ರೀಲಂಕಾದಲ್ಲಿ ಉಗ್ರರು ಬಾಂಬ್​ ದಾಳಿ ನಡೆಸಿದ್ದಾರೆ. ಶ್ರೀಲಂಕಾದದ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 49 ಜನ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ಮೂರು ಚರ್ಚ್​ ಹಾಗೂ ಮೂರು ಹೊಟೇಲ್​ಗಳ ಮೇಲೆ ದಾಳಿ ನಡೆದಿದೆ.

ಮೊದಲಿಗೆ ಸೈಂಟ್​ ಆಂಥೊನಿ ಚರ್ಚ್​ನಲ್ಲಿ ದಾಳಿ ನಡೆದಿದ್ದು, ನಂತರ ನಿಗೊಂಬಾ ನಗರದ ಕತುವಾಪಿಟಿಯಾದ ಸೈಂಟ್​ ಸೆಬಸ್ಟಿಯನ್​ ಚರ್ಚ್​ನಲ್ಲಿ ದಾಳಿಯಾಗಿದೆ. ನಮ್ಮ ಚರ್ಚ್​ನಲ್ಲಿ ಬಾಂಬ್​ ದಾಳಿ. ನಿಮ್ಮ ಕುಟುಂಬ ಸದಸ್ಯರಿದ್ದರೆ ದಯವಿಟ್ಟು ಬಂದು ನೆರವು ನೀಡಿ ಅಂತ ಸೈಂಟ್ ಸಬಸ್ಟಿಯನ್ ಚರ್ಚ್​ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಲಾಗಿದೆ. 300ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿರುವುದಾಗಿ ಬಾಟಿಕಲೋವಾ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES