Saturday, December 21, 2024

‘ಸ್ವಂತ ಪಕ್ಷವಿದ್ರೂ ಕಾಂಗ್ರೆಸ್​ಗೆ ಮತ, ಇಂಥಾ ಸ್ಥಿತಿ ಬರಬಾರದಿತ್ತು’..!

ಮಂಗಳೂರು: ತಮ್ಮದೇ ಸ್ವಂತ ಪಕ್ಷವಿದ್ದರೂ ಕುಮಾರಸ್ವಾಮಿ ಕುಟುಂಬ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕುಮಾರಸ್ವಾಮಿ ಕುಟುಂಬಕ್ಕೆ ಇಂಥ ಸ್ಥಿತಿ ಬರಬಾರದಿತ್ತು ಅಂತ ನಳಿನ್​ ಕುಮಾರ್​ ಕಟೀಲ್ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆದಿದ್ದು, ಸಿಎಂ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಎ. 18ರಂದು ಮತ ಚಲಾಯಿಸಿತ್ತು. ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸಿದ್ದು ಈ ಬಗ್ಗೆ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಸಿಎಂ ಕಾಲೆಳೆದಿದ್ದಾರೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್‌ ಮತ ಚಲಾಯಿಸಿದ ಫೋಟೋ ಪೋಸ್ಟ್ ಮಾಡಿ ಸಿಎಂಗೆ ವ್ಯಂಗ್ಯ ಮಾಡಿದ್ದಾರೆ.

ರಾಮನಗರ ತಾಲೂಕಿನ ಕೇತಗಾನ ಹಳ್ಳಿ ಮತಗಟ್ಟೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಹಾಗೂ ಪುತ್ರ ನಿಖೀಲ್ ಜೊತೆಗೆ ಬಂದು ಮತ ಚಲಾಯಿಸಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಡಿ.ಕೆ ಸುರೇಶ್ ಸ್ಪರ್ಧಿಸಿದ್ದಾರೆ.

RELATED ARTICLES

Related Articles

TRENDING ARTICLES