Monday, December 23, 2024

ಡ್ಯಾನ್ಸ್​ ಡ್ಯಾನ್ಸ್​ ವೋಟಿಂಗ್​ ಡ್ಯಾನ್ಸ್​..!

ಬೀದರ್​: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ 23ರಂದು ನಡೆಯಲಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದರ್​​ನ ಯುವಕ, ಯುವತಿಯರು ಡ್ಯಾನ್ಸ್​ ಮಾಡಿದ್ದಾರೆ.

ಬೀದರ್ ನಗರದ ಬಸವೇಶ್ವರ್ ವೃತ್ತದಲ್ಲಿಂದು ಜಿಲ್ಲಾ ಬಿಜೆಪಿ ಹಾಗೂ ಏಕತಾ ಗ್ರೂಪ್ ವತಿಯಿಂದ ಸಾರ್ವಜನಿಕರಲ್ಲಿ ಡ್ಯಾನ್ಸ್ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಮತದಾನ ಜಾಗೃತಿಯಲ್ಲಿ ಏಕತಾ ಸಂಘಟನೆಯ ಯುವಕ ಯುವತಿಯರು ವಿವಿಧ ರೀತಿಯ ಸಾಂಗ್​​ಗಳಿಗೆ ಸ್ಟೆಪ್​​ ಹಾಕುವ ಮೂಲಕ ಜಾಗೃತಿ ಮೂಡಿಸಿದ್ರು. ಡ್ಯಾನ್ಸ್​ ಮಾಡಿ 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ನೆರೆದಿದ್ದ ಸಾರ್ವಜನಿಕರಲ್ಲಿ ಕೇಳಿಕೊಂಡರು.

RELATED ARTICLES

Related Articles

TRENDING ARTICLES