Friday, January 3, 2025

ಐಪಿಎಲ್ ಬೆಟ್ಟಿಂಗ್​ಗೆ ವಿದ್ಯಾರ್ಥಿ ಬಲಿ..!

ಹಾಸನ: ಐಪಿಎಲ್​ ಬೆಟ್ಟಿಂಗ್​ಗೆ ವಿದ್ಯಾರ್ಥಿ ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದ ಲತೇಶ್​ ಕುಮಾರ್​ ಮೃತ ವಿದ್ಯಾರ್ಥಿ. ರಾಜೀವ್​ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡ್ತಿದ್ದ ಲತೇಶ್​ ಐಪಿಎಲ್​ ಬೆಟ್ಟಿಂಗ್ ಕಟ್ಟಿ ಸೋತಿದ್ದ. ಹಣಕ್ಕಾಗಿ ಬುಕ್ಕಿಗಳು ಬೆನ್ನಹಿಂದೆ ಬಿದ್ದಿದ್ದರು. ಮನೆ ಬಳಿಯೂ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದ್ದು, ಅವರ ಕಿರುಕುಳ ತಾಳಲಾರದೆ 3 ದಿನಗಳ ಹಿಂದೆ ಲತೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. 

 

RELATED ARTICLES

Related Articles

TRENDING ARTICLES