ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಪ್ರಕ್ರಿಯೆ ನಿನ್ನೆಯಷ್ಟೇ ಮುಗಿದಿದೆ. ಮೈತ್ರಿ ಸರ್ಕಾರ ಚಾಲ್ತಿಯಲ್ಲಿರುವಾಗಲೇ ಮುಖ್ಯಮಂತ್ರಿ ಆಗೋಕೆ ದೋಸ್ತಿ ನಾಯಕರ ನಡುವೆ ಸಿಕ್ಕಾಪಟ್ಟೆ ಕಾಂಪಿಟೀಶನ್ ಕಂಡುಬಂದಿದೆ. ಸಿಎಂ ಗಾದಿಗೆ ಮಾಜಿ ಸಿಎಂ-ಪ್ರಭಾವಿ ಸಚಿವರ ರೇಸ್ ನಡೆಯುತ್ತಿದ್ದು, ದೋಸ್ತಿ ನಾಯಕರು ಲೋಕಸಭಾ ಚುನಾವಣೆ ಹೊತ್ತಲ್ಲೇ ಸಿಎಂ ಸ್ಥಾನದ ಕನಸು ಕಾಣಲಾರಂಭಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಕನಸನ್ನು ಬಹಿರಂಗವಾಗಿಯೇ ತೋರಿಸಿಕೊಂಡಿದ್ದಾರೆ. ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ಗೂ ಸಿಎಂ ಪಟ್ಟದ ಮಹತ್ವಾಕಾಂಕ್ಷೆ ಇರೋದು ಸಾರ್ವಜನಿಕವಾಗಿ ಗೊತ್ತಾಗಿದೆ. ಪ್ರಚಾರದ ವೇಳೆ ಮನದಿಂಗಿತ ಹೊರಹಾಕಿದ ಇಬ್ಬರು ನಾಯಕರು, ಬಹಿರಂಗವಾಗಿಯೇ ತಮ್ಮ ಇಚ್ಛೆಯನ್ನು ಹೊರಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು, “ನಾನು ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡ್ತೀನಿ” ಅಂತ ಬಹಿರಂಗವಾಗಿ ಹೇಳಿದ್ದಾರೆ. ಕಲಬುರಗಿ ಪ್ರಚಾರ ಭಾಷಣದಲ್ಲಿ ಸಿದ್ದರಾಮಯ್ಯ ಈ ರೀತಿ ಘೋಷಣೆ ಮಾಡಿದ್ದಾರೆ. ಸಚಿವ ಡಿ. ಕೆ. ಶಿವಕುಮಾರ್ ಅವರು, “ನಾನು ಸಿಎಂ ಆಗೋಕೆ ಇನ್ನೂ ಟೈಮಿದೆ” ಅಂತ ಹೇಳಿದ್ದಾರೆ.