Friday, January 3, 2025

ರಿಲ್ಯಾಕ್ಸ್ ಮೂಡ್​ನಲ್ಲಿ ಸುತ್ತಾಡಿ ದಳಪತಿಗಳಿಗೆ ತಿರುಗೇಟು ಕೊಟ್ರಾ ಅಭಿಷೇಕ್..?

ಮಂಡ್ಯ : ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ‘ಲೋಕ’ಕಣ ತಣ್ಣಗಾಗಿದೆ. ಈಗ ಮೇ.23ರ ಫಲಿತಾಂಶವನ್ನು ಎದುರು ನೋಡ್ತಿದ್ದೇವೆ. ಈ ನಡುವೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರ ಪುತ್ರ ಅಭಿಷೇಕ್ ಅಂಬರೀಶ್ ಗಮನಸೆಳೆದಿದ್ದಾರೆ… ಮಂಡ್ಯದಲ್ಲಿ ಆರಾಮಾಗಿ ಸುತ್ತಾಡಿದ್ದಾರೆ.ಅಭಿಷೇಕ್ ಅವರ ಈ ಸುತ್ತಾಟ ದಳಪತಿಗಳಿಗೆ ಅವರು ನೀಡಿರೋ ತಿರುಗೇಟು ಅಂತಲೇ ಹೇಳಲಾಗ್ತಿದೆ.
ಮತದಾನದ ಮರುದಿನವಾದ ಇಂದು ಅಭಿಷೇಕ್ ರಿಲಾಕ್ಸ್​ ಮೂಡ್​ನಲ್ಲಿ ರೌಂಡ್ಸ್​ ಹೊಡೆದಿದ್ದಾರೆ. ಮಂಡ್ಯದ ಮಹಾವೀರ ಸರ್ಕಲ್​ನಲ್ಲಿ ಅಭಿ ಸುತ್ತಾಡಿದ್ದಾರೆ. ಸ್ನೇಹಿತರ ಜೊತೆ ಟೀ ಸ್ಟಾಲ್​ನಲ್ಲಿ ಚಹಾ ಸೇವಿಸಿ ಹರಟೆ ಹೊಡೆದಿದ್ದಾರೆ.
ಚುನಾವಣೆ ಬಳಿಕ ಸಿಂಗಾಪುರಕ್ಕೆ ಹೋಗ್ತಾರೆ ಅಂತ ಪೋಸ್ಟ್ ಮಾಡಿದ್ದ ಜೆಡಿಎಸ್​ಗೆ ಅಭಿ ಈ ಮೂಲಕ ತಿರುಗೇಟು ಕೊಟ್ರಾ? ಮಂಡ್ಯದಲ್ಲೇ ಇರೋದಾಗಿ ಭರವಸೆ ಕೊಟ್ಟಿದ್ದ ಅಭಿಷೇಕ್ ಕೊಟ್ಟ ಮಾತಿನಂತೆ ಮಂಡ್ಯದಲ್ಲೇ ಕಾಣಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES