Monday, December 23, 2024

ಪಕ್ಷದ ಚಿಹ್ನೆಯ ರವಿಕೆ ಧರಿಸಿ ಮತಗಟ್ಟೆಗೆ ಬಂದ ಮಹಿಳೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7ಗಂಟೆಯಿಂದ ಹಲವು ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಚುನಾವಣೆ ಸಂದರ್ಭ ಹಲವು ವಿಶೇಷ ಘಟನೆಗಳು ನಡೆಯುತ್ತವೆ. ಅಂತಹದೇ ಒಂದು ಸ್ವಾರಸ್ಯಕರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ಬಿಜೆಪಿ ಚಿಹ್ನೆ ಇರುವಂತಹ ಕುಪ್ಪಸ ತೊಟ್ಟು ಮತಗಟ್ಟೆಗೆ ಬಂದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 165ರಲ್ಲಿ ಸ್ಥಳೀಯ ಬಿಜೆಪಿ ನಾಯಕಿ ಪ್ರೇಮಲೀಲಾ ವೆಂಕಟೇಶ ಅವರು ಕಮಲದ ಚಿಹ್ನೆ ಇರುವ ರವಿಕೆ ತೊಟ್ಟು ಬಂದಿದ್ದಾರೆ. ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳೂ ಚಿಹ್ನೆಯನ್ನು ಗಮನಿಸದೇ ಮತದಾನಕ್ಕೆ ಅವಕಾಶ ಮಾಡಿದ್ದಾರೆ.

RELATED ARTICLES

Related Articles

TRENDING ARTICLES