ಚಾಮರಾಜಪೇಟೆ: ಕ್ಷೇತ್ರದ 211 ಬೂತ್ನಲ್ಲಿ ಚುನಾವಣಾಧಿಕಾರಿ ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ಲಿಸ್ಟ್ನಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ನಡೆಯುತ್ತಿದ್ದು, ಚಾಮರಾಜಪೇಟೆಯಲ್ಲಿ ಏಜೆಂಟ್ ಲಿಸ್ಟ್ ನಲ್ಲಿ ಹೆಸರು ಇದ್ದಿದ್ದನ್ನು ಕನ್ಫರ್ಮ್ ಮಾಡಿಕೊಂಡು ಸಾರ್ವಜನಿಕರು ಮತದಾನಕ್ಕೆ ಬಂದಿದ್ದರು. ಆದರೆ ಎಲೆಕ್ಷನ್ ಅಧಿಕಾರಿ ಲಿಸ್ಟ್ನಲ್ಲಿ ಕೆಲವು ಹೆಸರು ಡಿಲೀಟ್ ಆಗಿರುವುದು ತಿಳಿದುಬಂದಿದೆ. ಆಕ್ರೋಶಗೊಂಡ ಮತದಾರರು ಮತದಾನ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ವಿವಿಪುರಂ ಎಸಿಪಿ ವಲಿ ಪಾಶ ಆಗಮಿಸಿದ್ದಾರೆ. ಲಿಸ್ಟ್ನಲ್ಲಿ ಹೆಸರಿಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಹಿರಿಯ ಎಲೆಕ್ಷನ್ ಅಧಿಕಾರಿ ಸೆಕ್ಟರ್ ಆಫೀಸರ್ ಕೆ. ನಂಜೆಗೌಡ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.