Friday, December 27, 2024

ಸುಮಲತಾ ಪರ ಪೋಲಿಂಗ್​ ಏಜೆಂಟ್​ ಮೇಲೆ ಹಲ್ಲೆ..!

ಮಂಡ್ಯ : ನಿಖಿಲ್​ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಬೆಂಬಲಿಗರ ನಡುವೆ ಗಲಾಟೆ ಮುಂದುವರೆದಿದೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಸವನಪುರದಲ್ಲಿ ಘರ್ಷಣೆ ನಡೆದಿದ್ದು, ಸುಮಲತಾ ಪರ ಪೋಲಿಂಗ್ ಏಜೆಂಟ್​ ಚನ್ನಬಸವಣ್ಣ ಮೇಲೆ ಹಲ್ಲೆ ನಡೆದಿದೆ. ಬಸವನಪುರದ ಮತಗಟ್ಟೆ ಸಂಖ್ಯೆ 107ರಲ್ಲಿ ಘಟನೆ ನಡೆದಿದ್ದು, ಚನ್ನಬಸವಣ್ಣ ಅವರ ಹಲ್ಲೆ ನಡೆಸಿದವರು ಜೆಡಿಎಸ್​ ಕಾರ್ಯಕರ್ತರು ಎನ್ನಲಾಗಿದೆ.
ಇದಕ್ಕೂ ಮುನ್ನ ದೊಡ್ಡರಸಿನಕೆರೆಯಲ್ಲೂ ನಿಖಿಲ್​- ಸುಮಲತಾ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು.

RELATED ARTICLES

Related Articles

TRENDING ARTICLES