Friday, January 3, 2025

ಸುಮಲತಾಗೆ ಮತ ಹಾಕಿ ಫೋಟೋ ಅಪ್​ಲೋಡ್ ಮಾಡಿದ ಮತದಾರ..!

ಮಂಡ್ಯ : ಮತದಾನ ಮಾಡಿದ ಫೋಟೋವನ್ನು, ವಿಡಿಯೋವನ್ನು ಮಾಡುವುದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದು ಅಪರಾಧ ಅನ್ನೋ ಅರಿವು ಎಷ್ಟೋ ಜನರಿಗೆ ಇಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಗುಜ್ಜನಡುನಲ್ಲಿ (ತುಮಕೂರು ಜಿಲ್ಲೆ ಪಾವಗಡ ತಾಲೂಕು) ತಾಪಂ ಸದಸ್ಯ ಹನುಮಂತರಾಜು ತಾವು ಕಾಂಗ್ರೆಸ್​ಗೆ ವೋಟ್​​​ ವಿಡಿಯೋ ಹರಿಬಿಟ್ಟಿದ್ದರು.
ಇಂತಹದ್ದೇ ಒಂದು ಘಟನೆ ಮಂಡ್ಯದಲ್ಲಿ ನಡೆದಿದೆ. ನಾಗಮಂಗಲದ ವಾರ್ಡ್​ ನಂ.19ರ ನಿವಾಸಿ ರಮೇಶ್​ ಎನ್ನುವ ಮತದಾರ ತಾನು ಸುಮಲತಾ ಅವರಿಗೆ ಮತಹಾಕಿರುವ ಫೋಟೋವನ್ನು ಫೇಸ್​​ಬುಕ್​ ಗೆ ಅಪ್​ಲೋಡ್​ ಮಾಡಿದ್ದಾರೆ. ಈ ಮೂಲಕ ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದಾರೆ.

RELATED ARTICLES

Related Articles

TRENDING ARTICLES