Friday, December 27, 2024

ಕಾಲಿನಿಂದ ಮತಚಲಾಯಿಸಿದ ವಿಶೇಷಚೇತನ ಮಹಿಳೆ..!

ಬೆಳ್ತಂಗಡಿ : ಮತದಾನ ನಮ್ಮ ಹಕ್ಕು. ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡೋ ಅಧಿಕಾರವನ್ನು ಸಂವಿಧಾನ ನಮಗೆ ಈ ಹಕ್ಕಿನ ಮೂಲಕ ನೀಡಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ಕೆಲವರು ಈ ಕುರಿತು ಎಚ್ಚೆತ್ತುಕೊಳ್ಳೋದು ಇಲ್ಲ. ಮತ ಹಾಕೋಕೆ ಸಿಕ್ಕ ರಜೆಯಲ್ಲಿ ಟ್ರಿಪ್ ಹೊಡೆಯೋರೇ ಹೆಚ್ಚು. ಮತ ಹಾಕದೇ ನೆಪ ಹೇಳೋ ಮಂದಿ ನಡುವೆ ಕೆಲವರು ತುಂಬಾ ಗ್ರೇಟ್ ಎನಿಸಿಕೊಳ್ಳುತ್ತಾರೆ.
ಇಳಿ ವಯಸ್ಸಿನಲ್ಲಿ ಮತದಾನ ಮಾಡುವ ಅಜ್ಜ-ಅಜ್ಜಿಯರು ವೋಟ್ ಮಾಡಿ ಸ್ಫೂರ್ತಿಯಾಗಿರುವ ಉದಾಹರಣೆಗಳು ಇಂದೂ ಕೂಡ ನಮ್ಮ ಮುಂದಿವೆ. ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆ ಬಂದು ಮತಚಲಾಯಿಸಿದ ನವಜೋಡಿಗಳು, ಹಕ್ಕನ್ನು ಚಲಾಯಿಸಲೇ ಬೇಕು ಅಂತ ಕಷ್ಟಪಟ್ಟು ಬಂದು ಮತ ಚಲಾಯಿಸಿದ ಗರ್ಭಿಣಿ ಕೂಡ ನಮ್ಮ ನಡುವೆ ಇದ್ದಾರೆ.
ಹೀಗೆ ಇವರೆಲ್ಲರಿಗಿಂಥಾ ಗಮನಸೆಳೆಯುವುದು ಕೈಗಳಿಲ್ಲದ ಯುವತಿಯೊಬ್ಬರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ತಂಗಡಿಯವರಾದ ಸಬಿತಾ ಮೋನಿಶ್ ಅನ್ನೋ ಮಹಿಳೆ ಗರ್ಡಾಡಿಯ ಬೂತ್​ನಲ್ಲಿ ಮತಹಾಕಿದ್ದಾರೆ. ಅವರಿಗೆ ಎರಡೂ ಕೈಗಳಿಲ್ಲ..! ಕಾಲಿನಿಂದ ಮತಹಾಕಿ ಮಾದರಿಯಾಗಿದ್ದಾರೆ. ಅಧಿಕಾರಿಗಳು ಕಾಲಿನ ಬೆರಳಿಗೆ ಇಂಕ್ ಹಾಕಿದ್ದಾರೆ. ವಿಶೇಷ ಚೇತನ ಮಹಿಳೆ ಸಬಿತಾ ಅವರು ನಿಜಕ್ಕೂ ಎಲ್ಲರಿಗೂ ಮಾದರಿ.

RELATED ARTICLES

Related Articles

TRENDING ARTICLES