Wednesday, January 22, 2025

ಮಡಿಕೇರಿಯಲ್ಲಿ ಮದುಮಗನಿಂದ ಮತದಾನ

ಮಡಿಕೇರಿ: ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ಕಾವೇರಿದ್ದು, ರಾಜ್ಯದ ಹಲವೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಹಾಗೆಯೇ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ. ಮಡಿಕೇರಿಯ ಕಡಗದಾಳು ಗ್ರಾಮದಲ್ಲಿ ಯುವಕರೊಬ್ಬರು ಮದುವೆಮಂಟಪದಿಂದ ಬಂದು ಮತಚಲಾಯಿಸಿ ಮಾದರಿಯಾಗಿದ್ದಾರೆ.

ರವಿಕಾಂತ್- ಭವ್ಯಶ್ರಿ ಜೋಡಿ ಇಂದು ವಿವಾಹವಾಗುತ್ತಿದ್ದು, ಮದುಮಗ ಮದುವೆ ಮಂಟಪದಿಂದ ಮತಗಟ್ಟೆ ಬಳಿ ತೆರಳಿ ಮತ ಚಲಾಯಿಸಿದ್ದಾರೆ. ಕಡಗದಾಳು ಗ್ರಾಮದಲ್ಲಿ ಮತಚಾಲಾಯಿಸಿದ ರವಿಕಾಂತ್ ಅವರು ಮತದಾನ ಮಾಡಿ ಮತ್ತೆ ಮದುವೆ ಮಂಟಪಕ್ಕೆ ತೆರಳಿದ್ದಾರೆ.

RELATED ARTICLES

Related Articles

TRENDING ARTICLES