Friday, December 20, 2024

ಮತದಾನ ಮಾಡದೇ ಹ್ಯಾಟ್ರಿಕ್​ ಬಾರಿಸಿದ ರಮ್ಯಾ​​..!

ಮಂಡ್ಯ: ನಟಿ ರಮ್ಯಾ ಅವರು ಮತದಾನ ಮಾಡದೇ ಹ್ಯಾಟ್ರಿಕ್ ಬಾರಿಸಿದ್ದಾರೆ. ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಈ ಬಾರಿಯೂ ಮಂಡ್ಯ ಕಡೆ ಮುಖಮಾಡಿಲ್ಲ.

ಸತತ ಮೂರನೇ ಬಾರಿ ರಮ್ಯಾ ಮತ ಚಲಾಯಿಸದೆ ತಪ್ಪಿಸಿಕೊಂಡಿದ್ದಾರೆ. ಸಿಎಂ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಮ್ಯಾ ಮಾತ್ರ ಮತ ಚಲಾಯಿಸಿಲ್ಲ. ವಿಧಾನಸಭಾ ಚುನಾವಣೆ ವೇಳೆಯೂ ರಮ್ಯಾ ಬಂದಿರಲಿಲ್ಲ. ಲೋಕಸಭಾ ಉಪ ಚುನಾವಣೆಗೂ ರಮ್ಯಾ ಗೈರಾಗಿದ್ದರು. ಇದೀಗ ಮತ್ತೊಮ್ಮೆ ಮತದಾನಕ್ಕೆ ರಮ್ಯಾ ಚಕ್ಕರ್ ಹಾಕಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗೂ ರಮ್ಯಾ ಬಂದಿರಲಿಲ್ಲ. ವಿದ್ಯಾನಗರದ ಪಿಎಲ್​​ಡಿ ಬ್ಯಾಂಕ್ ಬೂತ್​​ನಲ್ಲಿ ಮತದಾನ ಮಾಡಬೇಕಿತ್ತು.

RELATED ARTICLES

Related Articles

TRENDING ARTICLES