Sunday, January 19, 2025

ಬೆಂಗಳೂರು ಮಳೆಗೆ ಓರ್ವ ಸಾವು

ಬೆಂಗಳೂರು: ಮೆಜೆಸ್ಟಿಕ್, ಮತ್ತಿಕೆರೆ, ಕೋರಮಂಗಲ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಲುಂಬಿನಿ ಗಾರ್ಡನ್​​ನಲ್ಲಿ ಮರ‌ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಕುಣಿಗಲ್ ಮೂಲದ ಕಿರಣ್ (23)  ಮೃತ ಯುವಕ. ಕೊರಿಯರ್ ಬಾಯ್ ಆಗಿ ಕೆಲಸ ಮಾಡ್ತಿದ್ದ‌ ಕಿರಣ್ ಬೈಕ್​​ನಲ್ಲಿ ಸಂಚರಿಸುತ್ತಿದ್ದರು. ಚಲಿಸುತ್ತಿದ್ದ ಬೈಕ್​ ಮೇಲೆ ಮರ ಬಿದ್ದು ಅವಘಡ ಸಂಭವಿಸಿದೆ. ಬೆಂಗಳೂರಿನ ಲುಂಬನಿ ಗಾರ್ಡನ್ ಬಳಿ ಘಟನೆ ನಡೆದಿದ್ದು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES