ಮಂಗಳೂರಿನಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಸ್ಮರಿಸಿದ್ದಾರೆ.
ದೇಶದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. 2014ಕ್ಕಿಂತಲೂ ಈ ಬಾರಿ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಅದರಲ್ಲೂ ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಸೇರಿದ್ದ ಜನರನ್ನು ಕಂಡು ನಾನು ದಂಗಾಗಿದ್ದೆ..! ಅಲ್ಲಿ ಸೇರಿದ್ದ ಜನರನ್ನು ನೋಡಿ ನಾನು ಕಾರಿನಿಂದ ಹೊರಬಂದು ಅವರತ್ತ ಕೈ ಬೀಸಿದ್ದೆ ಅಂತ ಮೋದಿ ಸ್ಮರಿಸಿದ್ದಾರೆ.
ಮಂಗಳೂರಿನಲ್ಲಿ ಮೋದಿ ಶಿಷ್ಟಾಚಾರ ಬದಿಗೊತ್ತಿ ಕಾರಿನಿಂದ ಹೊರಕ್ಕೆ ತಲೆ ಚಾಚಿ, ಎದ್ದು ನಿಂತು ನೆರೆದಿದ್ದ ಜನರತ್ತ ಕೈ ಬೀಸಿದ್ದರು. ಈ ಹಿಂದೆ ಸಮಾವೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಟ್ವೀಟ್ ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.