Saturday, April 20, 2024

ಬಿಜೆಪಿ-ಎಸ್​ಡಿಪಿಐ ಒಳ ಒಪ್ಪಂದ ಆರೋಪಕ್ಕೆ ಕಟೀಲ್ ತಿರುಗೇಟು

ಮಂಗಳೂರು : ಬಿಜೆಪಿ ಎಸ್​​ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಅನ್ನೋ ಕಾಂಗ್ರೆಸ್​ ನಾಯಕರ ಟೀಕೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್​ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗಲಿದೆ ಅನ್ನೋದು ಸುಳ್ಳು. ಹಾಗೇ ಆಗೋದಿದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು. ಕಳೆದ ಚುನಾವಣೆಯಲ್ಲಿ ಎಸ್​​ಡಿಪಿಐ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ಆದ್ರೂ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಏಳು ವಿಧಾನಸಭಾ ಕ್ಷೇತ್ರ ಗೆದ್ದಿತ್ತು. ಪ್ರಜಾಪ್ರಭುತ್ವದಲ್ಲಿ ಯಾರೇ ಚುನಾವಣೆಗೆ ಸ್ಪರ್ಧಿಸಬಹುದು ಎಂದರು.
ಕಳೆದ ವಿಧಾನಸಭೆಯಲ್ಲಿ ಮಾಡಿರುವ ಪೇಜ್ ಪ್ರಮುಖ್ ತಂತ್ರಗಾರಿಕೆಯನ್ನು ಈ ಬಾರಿಯ ಚುನಾವಣೆಗೂ ಅಳವಡಿಸಿಕೊಂಡಿದ್ದೇವೆ. ಮನೆ ಮನೆಗೆ ತೆರಳಿ ಮತಯಾಚಿಸಿದ್ದೇವೆ. ಜಿಲ್ಲೆಯಲ್ಲಿ ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆಗೊಂಡಿರುವುದಕ್ಕೆ ಕಳೆದ ಶನಿವಾರ ನಡೆದ ಮೋದಿ ರ್ಯಾಲಿಯೇ ಸಾಕ್ಷಿ. ಸುಮಾರು 600 ಮಂದಿ ಎನ್ಆರ್​ಐಗಳು ಮತದಾನ ಮಾಡಲೆಂದು ತವರಿಗೆ ಬಂದಿದ್ದಾರೆ ಎಂದರು.

RELATED ARTICLES

Related Articles

TRENDING ARTICLES