ಹಾಸನ/ಮಂಡ್ಯ : ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ಗೆ ಐಟಿ ಅಧಿಕಾರಿಗಳು ಮತ್ತೊಮ್ಮೆ ಶಾಕ್ ನೀಡಿದ್ದಾರೆ. ಹಾಸನ ಮತ್ತು ಮಂಡ್ಯದಲ್ಲಿ ಐಟಿ ದಾಳಿ ನಡೆದಿದೆ.
ಹಾಸನದಲ್ಲಿ ಸಚಿವ ಹೆಚ್.ಡಿ ರೇವಣ್ಣ ಅವರ ಆಪ್ತ, ಹೆಚ್ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾರ್ಲೆ ಇಂದ್ರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ,ಹೆಚ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿ.ಪಂ ಮಾಜಿ ಸದಸ್ಯ ಪಾಪಣ್ಣಿ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷ ಪಾಪಣ್ಣಿ ಹೆಚ್.ಡಿ ದೇವೇಗೌಡರ ತಮ್ಮನ ಮಗ.
ಅದೇರೀತಿ ಮಂಡ್ಯದಲ್ಲಿಯೂ ಐಟಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ಜಿಪಂ ಅಧ್ಯಕ್ಷೆ ನಾಗರತ್ನ ಪತಿ ಸ್ವಾಮಿಗೆ ಸೇರಿದ ಸೋಮನಹಳ್ಳಿಯಲ್ಲಿರುವ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸ್ವಾಮಿ ಮೈಸೂರು ವಲಯದ ಜೆಡಿಎಸ್ ವೀಕ್ಷಕರು.
ಇನ್ನು ಸಚಿವ ಪುಟ್ಟರಾಜು ಅವರ ಬೆಂಬಲಿಗ, ಜಿಪಂ ಸದಸ್ಯ ತಿಮ್ಮೇಗೌಡ ಮನೆ, ಪೆಟ್ರೋಲ್ ಬಂಕ್, ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ರೇವಣ್ಣ, ಪುಟ್ಟರಾಜು ಆಪ್ತರಿಗೆ ಐಟಿ ಶಾಕ್..!
TRENDING ARTICLES