Thursday, December 26, 2024

‘ನನ್ನಂಥಾ ಕಚಡ ನನ್ಮಗ ಇನ್ನೊಬ್ಬ ಹುಟ್ಟೋಕೆ ಸಾಧ್ಯವಿಲ್ಲ’ ಅಂತ ದರ್ಶನ್ ಹೇಳಿದ್ದೇಕೆ?

ಮಂಡ್ಯ : ಚಾಲೆಂಜಿಂಗ್ ಸ್ಟಾರ್ ದರ್ಶನ್ ”ನನ್ನಂಥಾ ಕಚಡ ನನ್ಮಗ ಇನ್ನೊಬ್ಬ ಹುಟ್ಟೋಕೆ ಸಾಧ್ಯವಿಲ್ಲ’ ಅಂತ ಹೇಳಿದ್ದಾರೆ. ಅರೆ, ದರ್ಶನ್ ಇಂಥಾ ಮಾತು ಯಾಕೆ ಹೇಳಿದ್ರು ಅಂತ ಕೇಳಿದ್ರಾ? ದರ್ಶನ್ ಇದನ್ನು ಆಕ್ರೋಶದಿಂದ ಹೇಳಿದ್ದು, ಇಷ್ಟು ದಿನ ತಾಳ್ಮೆ ಕಳೆದುಕೊಂಡು ದರ್ಶನ್ ಈ ಮಾತನ್ನು ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಸ್ವಾಭಿಮಾನಿ ಸಮ್ಮಿಲನ ಎಂಬ ಹೆಸರಲ್ಲಿ ಹಮ್ಮಿಕೊಂಡಿದ್ದ ಕ್ಲೈಮ್ಯಾಕ್ಸ್ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ಸುಮಲತಾ ಅವರ ಪರ ಪ್ರಚಾರಕ್ಕೆ ಬಂದಲ್ಲಿಂದ ಕೇಳಿ ಬರ್ತಾ ಇದ್ದ ಟೀಕೆಗಳಿಗೆ ಇಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ರು. ಎಲ್ಲಿಂದ ಮಾತು ತೆಗೆದುಕೊಳ್ಳಲಿ ಹೇಳಿ, ಇಷ್ಟು ದಿನ ಮಾತಾಡಿಲ್ಲ. ಇವತ್ತು ಎಲ್ಲದಕ್ಕೂ ಲೆಕ್ಕಾ ಕೊಡ್ತೀನಿ ಅಂತ ಮಾತು ಆರಂಭಿಸಿದ್ರು.

ನನ್ನಂಥಾ ಕಚಡ ನನ್ಮಗ ಇನ್ನೊಬ್ಬ ಹುಟ್ಟೋಕೆ ಸಾಧ್ಯವಿಲ್ಲ.ನಂಗೆ ಎರಡು ಮುಖವಿದೆ. ಇಷ್ಟವಾದ್ರೆ ಇಷ್ಟ, ಕಷ್ಟವಾದ್ರೆ, ಕಷ್ಟ. ಮಧ್ಯದ ಮುಖ ಹೊತ್ಕೊಂಡು ಯಾವತ್ತೂ ನಾನು ಓಡಾಡಿಲ್ಲ. ಆದ್ರೆ ಈ ಎಲೆಕ್ಷನ್​ನಲ್ಲಿ ಮಧ್ಯದ ಮುಖ ಹೊತ್ಕೊಂಡಿದ್ದೆ. ಕಾರಣ ನನ್ನಿಂದ ಸುಮಲತಾ ಅಮ್ಮನಿಗೆ ತೊಂದರೆ ಆಗಬಾರದು ಅಂತ ಹೇಳಿದ್ರು.
ಫಾರ್ಮ್ ಹೌಸಲ್ಲಿ ಡೈರಿ ಸಿಕ್ಕಿದೆ ತಗೊಂಡು ಹೋಗಿದ್ದಾರೆ ಅಂತಾರೆ. ಆ ಡೈರಿಯಲ್ಲಿ ಏನ್ ಸಿಗುತ್ತೆ? ಬೆಳಗ್ಗೆ ಎಷ್ಟು ಲೀಟರ್ ಹಾಲು ಡೈರಿಕೆ ಹಾಕಿದ್ವಿ, ಸಂಜೆ ಎಷ್ಟು ಲೀಟರ್ ಹಾಲು ಡೈರಿಗೆ ಹಾಕಿದ್ವಿ, ಹಸುವಿಗೆ ಕೊಡೋ ಇಂಜೆಕ್ಷನ್ ಬಗ್ಗೆ ಇರುತ್ತೆ ಎಂದು ತಿರುಗೇಟು ನೀಡಿದ್ರು.
ತಮ್ಮ ಫ್ಯಾಮಿಲಿ ವಿಚಾರ ಬಗ್ಗೆ ಕೇಳಿಬಂದ ಮಾತುಗಳಿಗೆ ಉತ್ತರಿಸಿದ ದರ್ಶನ್, ಯಾರ್ ಮನೇಲಿ ತಾನೆ ಗಲಾಟೆ ಆಗಿಲ್ಲ ಹೇಳಿ ಎಂದು ಪ್ರಶ್ನಿಸಿದ್ರು.

RELATED ARTICLES

Related Articles

TRENDING ARTICLES