Wednesday, April 24, 2024

ಮಹಾ ಘಟಬಂಧನ್ ಅಧಿಕಾರಕ್ಕೆ ಬಂದ್ರೆ ದಿನಕ್ಕೊಬ್ಬರು ಪ್ರಧಾನಿ : ಅಮಿತ್ ಶಾ

ದಾವಣಗೆರೆ : ಮಹಾ ಘಟಬಂಧನ್​ ಅಧಿಕಾರಕ್ಕೆ ಬಂದ್ರೆ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ”ನಾನು ದೇಶದ 244 ಕಡೆ ಪ್ರವಾಸ ಮಾಡಿದ್ದೇನೆ. ಎಲ್ಲಿ ನೋಡಿದರೂ ಮೋದಿ ಮೋದಿ ಅನ್ನೋ ಘೋಷಣೆ ಮೊಳಗುತ್ತಿದೆ. ಮಹಾ ಘಟಬಂಧನ್​ ಅಧಿಕಾರಕ್ಕೆ ಬಂದರೆ ದಿನಕ್ಕೆ ಒಬ್ಬರು ಪ್ರಧಾನಿ ಆಗುತ್ತಾರೆ. ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್, ಬುಧವಾರ ದೇವೇಗೌಡ್ರು, ಗುರುವಾರ ಚಂದ್ರಬಾಬು ನಾಯ್ಡು ಪ್ರಧಾನಿಯಾಗ್ತಾರೆ” ಅಂತ ಲೇವಡಿ ಮಾಡಿದರು. 
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧವೂ ಹರಿಹಾಯ್ದ ಅಮಿತ್ ಶಾ, ‘ರಾಜ್ಯದ ಜನ ನನ್ನ ಸಿಎಂ ಮಾಡಿಲ್ಲ. ಸಿಎಂ ಮಾಡಿದ್ದು ಸೋನಿಯಾ ಗಾಂಧಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಹರಿಹರದಲ್ಲಿ 275 ಎಕರೆಯಲ್ಲಿ ಗೊಬ್ಬರ ತಯಾರಿಕಾ ಕಾರ್ಖಾನೆ ನಿರ್ಮಾಣ ಮಾಡುತ್ತೇವೆ . ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. 10 ವರ್ಷ ಅವಧಿಯಲ್ಲಿ ಯುಪಿಎ ಏನೂ ಮಾಡಿಲ್ಲ. ಮೋದಿ ಸರ್ಕಾರದಲ್ಲಿ ಹೆಚ್ಚಿನ ಅನುದಾನ ನೀಡಿದ್ದೇವೆ.ಸಿಎಂ ಆದಾಕ್ಷಣ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದಿದ್ದರು. ಆದರೆ, ಅವರು ಹೇಳಿದಂತೆ ನಡೆದುಕೊಂಡಿಲ್ಲ. ಕಾಂಗ್ರೆಸ್​ನವರಿಗೆ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ಎಟಿಎಂ ರೀತಿಯಲ್ಲಿ ಹಣ ಪಡೆಯಲು ನೋಡುತ್ತಿದೆ ಎಂದು ಟೀಕಿಸಿದರು.
ಕೇಂದ್ರದಿಂದ ಬಡವರಿಗೆ ಎಲ್​ಪಿಜಿಯನ್ನು ಒದಗಿಸಲಾಗಿದೆ. ಬಡವರಿಗೆ ಮನೆಯನ್ನೂ ನೀಡುವ ಕೆಲಸ ಮಾಡಿದೆ. ಮೋದಿ ಸರ್ಕಾರದಿಂದ ಶೌಚಗೃಹ ನಿರ್ಮಾಣ ಕಾರ್ಯವಾಗಿದೆ. ರಾಜ್ಯದಲ್ಲಿ ಕಡಿಮೆ ಸ್ಥಾನ ಬಂದವರನ್ನು ಸಿಎಂ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ತಂತ್ರ ಇದಾಗಿದೆ. ನನ್ನನ್ನು ಕರ್ನಾಟಕದ ಜನ ಸಿಎಂ ಮಾಡಿಲ್ಲ. ಹೆಚ್‌ಡಿಕೆ ಸೋನಿಯಾ, ರಾಹುಲ್ ಕೃಪೆಯಿಂದ ಸಿಎಂ ಆಗಿದ್ದೇನೆ ಅಂತಿದ್ದಾರೆ. ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಶಿವಮೊಗ್ಗ, ಶಿಕಾರಿಪುರ ಹಾಗೂ ಹರಿಹರ ರೈಲ್ವೆ ಮಾರ್ಗ ಸರ್ವೆ ಕಾರ್ಯ ಮುಗಿದಿದೆ. ಶೀಘ್ರವೇ ರೈಲ್ವೆ ಮಾರ್ಗ ಕಾಮಗಾರಿ ಆರಂಭವಾಗಲಿದೆ. ದಾವಣಗೆರೆಯಲ್ಲಿ ಪಾಸ್​​ಪೋರ್ಟ್​​ ಹಾಗೂ ವೀಸಾ ಕೇಂದ್ರ ಸ್ಥಾಪನೆಯಾಗಿವೆ. ದಾವಣಗೆಯನ್ನು ಸ್ಮಾರ್ಟ್​ಸಿಟಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಹೊಸ ರಸ್ತೆಗಳ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES