Monday, December 23, 2024

ಯೋಗಿ, ಮಾಯಾವತಿ ಚುನಾವಣಾ ಪ್ರಚಾರಕ್ಕೆ ತಡೆ

ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ಆದೇಶಿಸಿದೆ. ಚುನಾವಣಾ ಪ್ರಚಾರದ ಸಂದರ್ಭ ಧರ್ಮದ ಕುರಿತಾದ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಪ್ರಚಾರ ನಡೆಸದಂತೆ ಯೋಗಿ ಆದಿತ್ಯನಾಥ್​ಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಹಾಗೆಯೇ ಮಾಯಾವತಿ ಅವರೂ 2 ದಿನಗಳ ಕಾಲ ಪ್ರಚಾರ ನಡೆಸದಂತೆ  ತಡೆಯೊಡ್ಡಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಹಾಗೂ ಮಾಯಾವತಿ ವಿರುದ್ಧ ಆಯೋಗ ಕ್ರಮ ಜರುಗಿಸಿದೆ. ಪ್ರಚಾರದ ಸಂದರ್ಭ ಅಭ್ಯರ್ಥಿಗಳು ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ, ಕ್ರಮ ಜರುಗಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೋರ್ಟ್​ ವಿಚಾರಣೆ ನಡೆಸಿದೆ. “ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಅಧಿಕಾರವಿಲ್ಲ” ಎಂದು ಆಯೋಗದ ಪ್ರತಿನಿಧಿ ವಿಚಾರಣೆ ಸಂದರ್ಭ ತಿಳಿಸಿದ್ದರು. ಇದೀಗ ಯೋಗಿ ಆದಿತ್ಯನಾಥ್​ಗೆ ಎರಡು ದಿನ ಹಾಗೂ ಮಾಯಾವತಿಗೆ 2 ದಿನ ಪ್ರಚಾರ ನಿಷೇಧಿಸಲಾಗಿದೆ. ಪ್ರಚಾರದ ಸಂದರ್ಭ ಯೋಗಿ ಆದಿತ್ಯನಾಥ್ ಅವರು ಸೇನೆಯನ್ನ ಮೋದಿ ಸೇನೆ ಎಂದು ಕರೆದಿದ್ದು ವಿವಾದಕ್ಕೆಡೆ ಮಾಡಿತ್ತು. ವಿಪಕ್ಷಗಳು ಯೋಗಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದವು.

RELATED ARTICLES

Related Articles

TRENDING ARTICLES