ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಭಾರೀ ಬೆಂಬಲ ಸಿಕ್ಕಿತ್ತು. ಕಾಂಗ್ರೆಸ್ ಕಾರ್ಯರ್ತರೂ ಕೂಡ ಸುಮಲತಾ ಅವರಿಗೆ ಕೈ ಜೋಡಿಸಿದ್ದರು. ಆದರೆ ಕೆ.ಆರ್ ನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ್ದು ಮೈತ್ರಿ ಪಾಳಯಕ್ಕೆ ವರವಾಯ್ತು ಅಂತ ಅನಿಸುತ್ತಿದೆ. ರಾಹುಲ್ ಭೇಟಿ ವರ್ಕೌಟ್ ಆಗಿದೆ ಅಂತ ಹೇಳಲಾಗ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಅವರಿಗೆ ಕೈ ಕೊಟ್ರಾ ಅನ್ನೋ ಪ್ರಶ್ನೆ ಮೂಡಿದೆ.
ಹೌದು ಈ ಪ್ರಶ್ನೆ ಮೂಡೋಕೆ ಕಾರಣ, ಇಂದು ಸುಮಲತಾ ಅವರ ಪ್ರಚಾರದ ವೇಳೆ ಕಳೆದ ದಿನಗಳಂತೆ ಹೆಚ್ಚು ಜನ ಸೇರಿರಲಿಲ್ಲ. ಕೆ.ಆರ್ ನಗರದಲ್ಲಿ ಸುಮಲತಾ ಪ್ರಚಾರದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸೇರಿದ್ದರು. ಇದು ಕಾಂಗ್ರೆಸ್ ಕಾರ್ಯಕರ್ತರು ಸುಮಲತಾಗೆ ಕೈ ಕೊಟ್ಟರಾ ಅನ್ನೋ ಅನುಮಾನವನ್ನು ಹುಟ್ಟುಹಾಕಿದೆ. ಅತ್ತ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಅವರ ಹೆಸರನ್ನು ಹೇಳಿಕೊಂಡು ಸುಮಲತಾ ಮತ ಬೇಟೆಯಾಡುತ್ತಿದ್ದರೆ, ಇತ್ತ ರವಿಶಂಕರ್ ಮಾಜಿ ಸಿಎಂ ಜೊತೆ ಕಾಣಿಸಿಕೊಂಡಿದ್ದಾರೆ.
ಸುಮಲತಾಗೆ ಕೈ ಕೊಟ್ರಾ ಕಾಂಗ್ರೆಸ್ ಕಾರ್ಯಕರ್ತರು?
TRENDING ARTICLES