Wednesday, November 6, 2024

ಗ್ರೌಂಡ್​​ರಿಪೋರ್ಟ್​: ಹುಕ್ಕೇರಿಗೆ ಹುಗ್ಗಿನಾ? ಸಾಹೇಬರಿಗೆ ಸಕ್ಕರೆನಾ?

ಗ್ರೌಂಡ್​​ರಿಪೋರ್ಟ್​ 23 : ಚಿಕ್ಕೋಡಿ ಲೋಕಸಭಾ ಕ್ಷೇತ್ರ

ಚಿಕ್ಕೋಡಿ : ಸಪ್ತ ನದಿಗಳ ನಾಡು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಕಾಶ್​ ಹುಕ್ಕೇರಿ ಕಾಂಗ್ರೆಸ್​ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿ ಬಿಜೆಪಿಯ ಅಣ್ಣಾ ಸಾಹೇಬ ಜೊಲ್ಲೆ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕಡೆಗಳಲ್ಲಿ ಬಿಜೆಪಿ, 4 ಕಡೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಚಿಕ್ಕೋಡಿ -ಕಾಂಗ್ರೆಸ್- ಗಣೇಶ್ ಹುಕ್ಕೇರಿ

ನಿಪ್ಪಾಣಿ – ಬಿಜೆಪಿ – ಶಶಿಕಲಾ ಜೊಲ್ಲೆ

ಅಥಣಿ -ಕಾಂಗ್ರೆಸ್  -ಮಹೇಶ್ ಕಮಟೊಳ್ಳಿ

ಕಾಗವಾಡ -ಕಾಂಗ್ರೆಸ್ – ಶ್ರೀಮಂತ ಪಾಟೀಲ್

ಕುಡಚಿ -ಬಿಜೆಪಿ- ಪಿ.ರಾಜೀವ

ರಾಯಬಾಗ – ಬಿಜೆಪಿ- ದುರ್ಯೋಧನ ಐಹೊಳೆ

ಹುಕ್ಕೇರಿ -ಬಿಜೆಪಿ -ಉಮೇಶ್ ಕತ್ತಿ

ಯಮಕನಮರಡಿ  – ಕಾಂಗ್ರೆಸ್ – ಸತೀಶ್ ಜಾರಕಿಹೊಳಿ

ಪಕ್ಷಗಳ ಬಲಾಬಲ
1951 : ಪಾಟೀಲ್​ ಶಂಕರಗೌಡ, ಕಾಂಗ್ರೆಸ್​
1962 : ವಿ.ಎಲ್​ ಪಾಟೀಲ್, ಕಾಂಗ್ರೆಸ್
1971, 1977, 1980,1984, 1989, 1991 : ಬಿ.ಶಂಕರನಂದ,
1996 : ರತ್ನಮಾಲ ಧರೇಶ್ವರ ಸವನೂರ್​, ಜನತಾದಳ
1998 : ರಮೇಶ್ ಜಿಗಜಿಣಗಿ, ಲೋಕಶಕ್ತಿ
1999: ರಮೇಶ್​ ಜಿಗಜಿಣಗಿ, ಜನತಾದಳ
2004 : ರಮೇಶ್​​ ಜಿಗಜಿಣಗಿ, ಬಿಜೆಪಿ
2009 : ರಮೇಶ್​ ಕತ್ತಿ, ಬಿಜೆಪಿ
2014 : ಪ್ರಕಾಶ್ ಹುಕ್ಕೇರಿ, ಕಾಂಗ್ರೆಸ್

ಲೋಕ ಸಮರ – 2014
ಪ್ರಕಾಶ್​​ ಹುಕ್ಕೇರಿ – ಕಾಂಗ್ರೆಸ್ – 4,74,373

ರಮೇಶ್​​ ಕತ್ತಿ – ಬಿಜೆಪಿ – 4,71,370

ಅಂತರ – 3,003

‘ಮತ’ ಗಣಿತ

ಪುರುಷರು – 8,06,052

ಮಹಿಳೆಯರು – 7,73,167

ತೃತೀಯ ಲಿಂಗಿಗಳು – 90

ಒಟ್ಟು – 15,79,309

‘ಜಾತಿ’ ಗಣಿತ

ಲಿಂಗಾಯತರು – 3,70,592

ಕುರುಬರು – 1,84,076

ಎಸ್​ಸಿ, ಎಸ್​​ಟಿ – 3,04,623

ಮುಸ್ಲಿಂ – 1,98,179

ಮರಾಠ  -1,47,228

ಹಣಬರ – 1,04 890

ಜೈನ್ – 1,03,225

ಬ್ರಾಹ್ಮಣರು -34,876

ಕಮ್ಮಾರ/ಕುಂಬಾರ  -22,493

ನೇಕಾರ – 14,863

ವಿಶ್ವಕರ್ಮ – 17,977

ಮಡಿವಾಳ – 11,139

ರಜಪೂತ 6,811

ಇತರೆ – 58,337

ಅಭ್ಯರ್ಥಿಗಳ ಬಲಾಬಲ 

ಪ್ರಕಾಶ್​​​ ಹುಕ್ಕೇರಿ ಅವರಿಗೆ ಪೂರಕ ಅಂಶಗಳು
ಸರಳ ಸಜ್ಜನಿಕೆಯ ರಾಜಕಾರಣಿ
ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ಮುಖಂಡ
ಜನಸಾಮಾನ್ಯರ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ
ಸ್ಥಳೀಯ ಕಾಂಗ್ರೆಸ್ಸಿಗರೊಂದಿಗೆ ಒಳ್ಳೆಯ ಬಾಂಧವ್ಯ
ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆ
ಸಾಂಪ್ರದಾಯಿಕ ಮತಗಳ ಮೇಲೆ ಹೆಚ್ಚಿನ ವಿಶ್ವಾಸ
ಚಿಕ್ಕೋಡಿ ಶಾಸಕ, ಪುತ್ರ ಗಣೇಶ ಹುಕ್ಕೇರಿ ಬಲ

ಪ್ರಕಾಶ ಹುಕ್ಕೇರಿ ಅವರಿಗಿರೋ ಆತಂಕಗಳೇನು?
ಮೋದಿ ಪರ ಹೆಚ್ಚಿದ ಯುವಜನರ ಒಲವು
ಸ್ವಪಕ್ಷದ ಶಾಸಕರು ಕೈ ಕೊಡುವ ಸಾಧ್ಯತೆ
ಸಂಸದರ ಅನುದಾನ ಬಳಕೆಯಲ್ಲಿ ನಿರಾಸಕ್ತಿ
ಕಳೆದ ಬಾರಿ ನೀಡಿದ ಭರವಸೆಗಳು ಅಪೂರ್ಣ
ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡದಿರುವುದು
ಮುಳುಗಡೆ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ನಿರ್ಲಕ್ಷ್ಯ
ಚಿಕ್ಕೋಡಿಯಲ್ಲಿ ತೆರೆಯದ ಸಂಸದರ ಕಚೇರಿ
ಭರವಸೆಯಾಗಿಯೇ ಉಳಿದ ಚಿಕ್ಕೋಡಿ ಜಿಲ್ಲಾ ಕೇಂದ್ರ
ಚುನಾವಣೆ ವೇಳೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತು
ದಳಪತಿಗಳ ನೆಲೆ ಇಲ್ಲದಿರುವ ಉತ್ತರ ಕರ್ನಾಟಕದ ಕ್ಷೇತ್ರ

ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಪೂರಕ ಅಂಶಗಳೇನು?
ಎಲ್ಲೆಡೆ ಇರುವಂತೆ ಇಲ್ಲೂ ಪ್ರಧಾನಿ ಮೋದಿ ಹವಾ
ಪಕ್ಷದ ಸಂಘಟನೆ, ಕಾರ್ಯಕರ್ತರ ಬಗ್ಗೆ ಹೆಚ್ಚಿನ ವಿಶ್ವಾಸ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಷಾಗೆ ಪರಮಾಪ್ತ
ಪತಿಗೆ ಬೆನ್ನೆಲುಬಾಗಿ ನಿಂತಿರುವ ಶಾಸಕಿ ಶಶಿಕಲಾ ಜೊಲ್ಲೆ
ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪರಾಭವ
ಸೋತ ವ್ಯಕ್ತಿಯೆಂದು ಕ್ಷೇತ್ರದಲ್ಲಿ ಜನರಿಂದ ಅನುಕಂಪದ ಅಲೆ
ನಿಪ್ಪಾಣಿ ಮತ್ತು ಚಿಕ್ಕೋಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಡಿತ
ಪ್ರತಿಷ್ಠಿತ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಒಡೆಯ

ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಆತಂಕಗಳೇನು?
ಆರಂಭದಿಂದಲೂ ಸ್ವಪಕ್ಷದ ಬಂಡಾಯ ನಾಯಕರ ಭಯ
ಕ್ಷೇತ್ರದ ಬಿಜೆಪಿ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ನಾಯಕರ ಪ್ರಭಾವ
ಕಾಂಗ್ರೆಸ್ಸಿನ ಜಾರಕಿಹೊಳಿಯವರ ರಾಜಕೀಯ ಪ್ರಭಾವ
ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಮಗನೇ ನೇತೃತ್ವ
ಬ್ಯುಸಿನೆಸ್​​ನಲ್ಲಿ ಸದಾ ಬ್ಯುಸಿಯಾಗಿರುವ ಜೊಲ್ಲೆ ಕುಟುಂಬ
ಜನಸಾಮಾನ್ಯರ ಕೈಗೆ ಸಿಗದ ರಾಜಕಾರಣಿಯೆಂಬ ಅಪಖ್ಯಾತಿ

ಪ್ರಭಾವ ಬೀರುವ ಅಂಶಗಳು
ಕ್ಷೇತ್ರದ ಪ್ರಮುಖ ಸಮಸ್ಯೆ ಸವಳು-ಜವಳು
ಕೃಷ್ಣಾ ನದಿತೀರದಲ್ಲಿ ಲಕ್ಷಾಂತರ ಹೆಕ್ಟೇರ್​ ಭೂಮಿ ಹಾಳು
ಜಮೀನುಗಳಲ್ಲಿರುವ ಉಪ್ಪಿನಂಶ ತಡೆಗೆ ಕ್ರಮ ಕೈಗೊಳ್ಳದಿರುವುದು
ಕ್ಷೇತ್ರದಿಂದ ನೆರೆ ರಾಜ್ಯಕ್ಕೆ ಜನರು ವಲಸೆ ಹೋಗುತ್ತಿರುವುದು
ಹೇಳಿಕೊಳ್ಳುವಂತಹ ಬೃಹತ್ ಕೈಗಾರಿಕೆಗಳು ಇಲ್ಲದಿರುವುದು
ರಸ್ತೆ, ಸೇತುವೆ ಸೇರಿ ಅಭಿವೃದ್ಧಿ ಕಾರ್ಯ ಇನ್ನೂ ಮರೀಚಿಕೆ
ವ್ಯವಸ್ಥಿತ ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲದಿರುವುದು
ಚಿಕ್ಕೋಡಿ ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ನಿರಾಸಕ್ತಿ ತೋರಿರುವುದು

ಸಂಸದರು ಮಾಡಿದ್ದೇನು…?
ಚಿಕ್ಕೋಡಿ ನಗರದಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆ
ಸರ್ಕಾರಿ ಉಪಕರಣಗಳ ಕಾಲೇಜು ಆರಂಭ
ಚಿಕ್ಕೋಡಿಯಲ್ಲಿ 100 ಹಾಸಿಗೆಯ ತಾಯಿ-ಮಗು ಆಸ್ಪತ್ರೆ ಮಂಜೂರಾತಿ
ಸಂಸದರ ಅನುದಾನದಡಿ ಕೆಲವೆಡೆ ರಸ್ತೆ, ಸೇತುವೆ ನಿರ್ಮಾಣ
ಕೆಲ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಕ್ಷೇತ್ರ ಪರಿಚಯ
ಸಕ್ಕರೆ ಲಾಬಿಯದ್ದೇ ಅಧಿಪತ್ಯ
ಆರಂಭದಲ್ಲಿ ಮೀಸಲು, ಆಮೇಲೆ ಸಾಮಾನ್ಯ ಕ್ಷೇತ್ರ ರಚನೆ
ಬೆಳಗಾವಿ ಜಿಲ್ಲೆಯ ಅತ್ಯಂತ ಪ್ರಾಬಲ್ಯವುಳ್ಳ ತಾಲೂಕು
ಘಟಾನುಘಟಿ ರಾಜಕೀಯ ನಾಯಕರಿರುವ ಲೋಕಸಭಾ ಕ್ಷೇತ್ರ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ನೆಲವೂರಿರುವ ಸ್ಥಳ
ಕುಟುಂಬ ಅಧಿಪತ್ಯ ಹೊಂದಿರುವ ಪ್ರತಿಷ್ಠಿತ ಕ್ಷೇತ್ರ !

RELATED ARTICLES

Related Articles

TRENDING ARTICLES