Saturday, April 20, 2024

ಗ್ರೌಂಡ್​ ರಿಪೋರ್ಟ್ : ಕೊಪ್ಪಳದಲ್ಲಿ ಬದ್ಧ ವೈರಿಗಳ ರೋಚಕ ಕದನ

ಗ್ರೌಂಡ್​ ರಿಪೋರ್ಟ್ 22 : ಕೊಪ್ಪಳ ಲೋಕಸಭಾ ಕ್ಷೇತ್ರ
ಕೊಪ್ಪಳ : ಬದ್ಧ ವೈರಿಗಳ ನಡುವಿನ ರೋಚಕ ಕದನಕ್ಕೆ ಸಾಕ್ಷಿಯಾಗಿರೋದು ಕೊಪ್ಪಳ ಲೋಕಸಭೆ. ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿ ಅಭ್ಯರ್ಥಿ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಕೆ. ರಾಜಶೇಖರ್ ಹಿಟ್ನಾಳ್. ಈ ಇಬ್ಬರ ನಡುವಿನ ಹಣಾಹಣಿಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಅನ್ನೋದು ಕುತೂಹಲ.
ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕಡೆಗಳಲ್ಲಿ ಕಾಂಗ್ರೆಸ್. 4 ಕಡೆಗಳಲ್ಲಿ ಬಿಜೆಪಿ, 1 ಕಡೆ ಮಾತ್ರ ಜೆಡಿಎಸ್​ ಎಂಎಲ್​ಎಗಳಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಕೊಪ್ಪಳ – ಕಾಂಗ್ರೆಸ್  -ರಾಘವೇಂದ್ರ ಹಿಟ್ನಾಳ

ಯಲಬುರ್ಗಾ – ಬಿಜೆಪಿ – ಹಾಲಪ್ಪ ಆಚಾರ್ಯ

ಕುಷ್ಟಗಿ -ಕಾಂಗ್ರೆಸ್  -ಅಮರೇಗೌಡ ಬಯ್ಯಾಪುರ

ಕನಕಗಿರಿ  -ಬಿಜೆಪಿ – ಬಸವರಾಜ ದಢೆಸುಗೂರು

ಗಂಗಾವತಿ – ಬಿಜೆಪಿ- ಪರಣ್ಣ ಮುನವಳ್ಳಿ

ಸಿರಗುಪ್ಪ – ಬಿಜೆಪಿ – ಸೋಮಲಿಂಗಪ್ಪ (ಬಳ್ಳಾರಿ ಜಿಲ್ಲೆ)

ಸಿಂಧನೂರು-  ಜೆಡಿಎಸ್​ ವೆಂಕಟರಾವ್ ನಾಡಗೌಡ (ರಾಯಚೂರು ಜಿಲ್ಲೆ)

ಮಸ್ಕಿ ಕಾಂಗ್ರೆಸ್​​​​-  (ಪ್ರತಾಪ ಗೌಡ ಪಾಟೀಲ್) (ರಾಯಚೂರು ಜಿಲ್ಲೆ)

ಪಕ್ಷಗಳ ಬಲಾಬಲ
1951 : ಶಿವಮೂರ್ತಿ ಸ್ವಾಮಿ, ಪಕ್ಷೇತರ
1957 : ಸಂಗಪ್ಪ ಅಂದಾನಪ್ಪ, ಕಾಂಗ್ರೆಸ್
1962 : ಎ. ಸಂಗಣ್ಣ, ಕಾಂಗ್ರೆಸ್
1971, 1977 : ಸಿದ್ದರಾಮೇಶ್ವರ ಸ್ವಾಮಿ, ಕಾಂಗ್ರೆಸ್​
1980, 1984 : ಹೆಚ್​.ಜಿ ರಾಮುಲು, ಕಾಂಗ್ರೆಸ್
1989 : ಬಸವರಾಜ್​ ಪಾಟೀಲ್, ಜನತಾದಳ
1991 : ಅನ್ವರಿ ಬಸವರಾಜ್​ ಪಾಟೀಲ್, ಕಾಂಗ್ರೆಸ್
1996 : ಬಸವರಾಜ ರಾಯರೆಡ್ಡಿ, ಜನತಾದಳ
1998, 1999 : ಹೆಚ್​.ಜಿ ರಾಮುಲು, ಕಾಂಗ್ರೆಸ್
2004 : ಕೆ. ವಿರೂಪಾಕ್ಷಪ್ಪ, ಕಾಂಗ್ರೆಸ್
2009 : ಶಿವರಾಮೇಗೌಡ ಬಿಜೆಪಿ,
2014 : ಸಂಗಣ್ಣ ಕರಡಿ ಬಿಜೆಪಿ

ಲೋಕ ಸಮರ – 2014

ಸಂಗಣ್ಣ ಕರಡಿ – ಬಿಜೆಪಿ – 4,86,383

ಕೆ. ಬಸವರಾಜ್​ ಹಿಟ್ನಾಳ್ -​​ ಕಾಂಗ್ರೆಸ್​​ – 4,53,969

ಗೆಲುವಿನ ಅಂತರ – 32,414

‘ಮತ’ ಗಣಿತ
ಪುರುಷರು -8,53,745

ಮಹಿಳೆಯರು – 8,62,903

ತೃತೀಯ ಲಿಂಗಿಗಳು – 112

ಒಟ್ಟು-17,16,760

‘ಜಾತಿ’ ಗಣಿತ

ಲಿಂಗಾಯತ – 3,44,112

ಎಸ್​​ಸಿ​​ – 2,95,646

ಕುರುಬ – 2,49,544

ವಾಲ್ಮೀಕಿ- 2,05,460

ಮುಸ್ಲಿಂ -2,00,898

ಉಪ್ಪಾರ – 62,553

ಈಳಿಗೇರ್ – 17,829

ರೆಡ್ಡಿ -27,995

ಅಭ್ಯರ್ಥಿಗಳ ಬಲಾಬಲ
ಸಂಗಣ್ಣ ಕರಡಿ ಅವರಿಗೆ ಪೂರಕ ಅಂಶಗಳೇನು?
ಪ್ರಬಲ ಜಾತಿ, ಪ್ರಧಾನಿ ನರೇಂದ್ರ ಮೋದಿ ಅಲೆ
ಯುವ ಮತದಾರರು ಹೆಚ್ಚು ಇರುವುದರಿಂದ ಬಿಜೆಪಿಗೆ ವರದಾನ ಆಗಬಹುದು
ಆಡಳಿತದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು

ಸಂಗಣ್ಣ ಕರಡಿ ಅವರಿಗಿರೋ ಆತಂಕಗಳೇನು?
ಕೇಂದ್ರದಿಂದ ಅನುದಾನ ತರುವಲ್ಲಿ ಹಿನ್ನಡೆ
ಸಂಸದರ ಆದರ್ಶ ಗ್ರಾಮ ಸಂಪೂರ್ಣ ವಿಫಲ
ಆರ್​​ಎಸ್​ಎಸ್​ ವಿರುದ್ಧ ಅಲೆ
ಸಂಸದರಾದ ಬಳಿಕ ಕ್ಷೇತ್ರ ಕಡೆಗಣನೆ
ಕೆ.ಎಸ್. ಈಶ್ವರಪ್ಪರಿಂದ ಮುಸ್ಲಿಂ ವಿರೋಧಿ ಹೇಳಿಕೆ

ಕೆ. ರಾಜಶೇಖರ್​​​ ಹಿಟ್ನಾಳ್​​ ಅವರಿಗೆ ಪೂರಕ ಅಂಶಗಳೇನು?
ಕಳೆದ ಬಾರಿ ತಂದೆಯ ಸೋಲಿನ ಅನುಕಂಪದ ಅಲೆ
ಸಮಿಶ್ರ ಸರ್ಕಾರದ ಸಾಧನೆಗಳ ಮೇಲೆ ಅಭ್ಯರ್ಥಿಯ ಪ್ರಚಾರ
ತಂದೆ ಮತ್ತು ಸಹೋದರ ರಾಜಕೀಯದಲ್ಲಿ ಸಕ್ರಿಯರಾಗಿರುವುದು
ಒಂದು ಬಾರಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಆಡಳಿತದ ಅನುಭವ
ಕ್ಷೇತ್ರದಲ್ಲಿ ಕಾಂಗ್ರೆಸ್​ ಜೊತೆಗೆ ಜೆಡಿಎಸ್​ ಶಾಸಕರ ಬೆಂಬಲ
ಘಟಾನುಘಟಿ ರಾಜಕಾರಣಿಗಳ ಸಂಪೂರ್ಣ ಬೆಂಬಲ

ಕೆ.ರಾಜಶೇಖರ್​ ಹಿಟ್ನಾಳ್​​ ಅವರಿಗೆ ಆತಂಕಗಳೇನು?

ಕುಟುಂಬ ರಾಜಕಾರಣ ಎನ್ನುವ ಆರೋಪ
ಟಿಕೆಟ್​ ಆಕಾಂಕ್ಷಿಗಳಾಗಿದ್ದ ‘ಕೈ’ ಮುಖಂಡರಿಗಿರುವ ಅಸಮಾಧಾನ
ಕೊಪ್ಪಳ ಜಿಲ್ಲಾ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿರುವುದು
ಜಿಲ್ಲಾ ಪಂಚಾಯಿತಿಯಿಂದ ನೇರವಾಗಿ ರಾಷ್ಟ್ರ ರಾಜಕಾರಣಕ್ಕೆ ಬಂದಿರುವುದು

ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು
ಕೃಷ್ಣಾ ಬಿ ಸ್ಕೀಂ ಯೋಜನೆ ನೆನೆಗುದಿಗೆ ಬಿದ್ದಿರುವುದು
ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ವಿಚಾರ ತಟಸ್ಥವಾಗಿರುವುದು
ವಿಜಯನಗರ ಸಾಮ್ರಾಜ್ಯದ ತವರೂರು ಐತಿಹಾಸಿಕ ಸ್ಥಳ ಆನೆಗುಂದಿ ಕಡೆಗಣನೆ
ತುಂಗಭದ್ರಾ ಜಲಾಶಯ ತುಂಬಿದರೂ 2ನೇ ಬೆಳೆಗೆ ನೀರು ಬಿಡದೇ ಇರುವುದು
ಸ್ಟೀಲ್ ಕಾರ್ಖಾನೆಗಳಿಂದ ವಿಷಕಾರಿ ರಾಸಾಯನಿಕ ಹೊಗೆಯಿಂದ ಮಾಲಿನ್ಯ
ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನಾರೋಗ್ಯದ ವಾತಾವರಣ
ಯುವ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದರಲ್ಲೂ ಹಿಂದುಳಿದ ಕ್ಷೇತ್ರ

ಸಂಸದರು ಮಾಡಿದ್ದೇನು? (ಅನುದಾನ ಬಳಕೆ) (ಸಂಗಣ್ಣ ಕರಡಿ)
ಗಂಗಾವತಿಯಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆ
ಕುಷ್ಟಗಿ ಪಟ್ಟಣದಲ್ಲಿ ಹೆದ್ದಾರಿ ಮೇಲ್ಸೇತುವೆಗೆ ₹ 70 ಕೋಟಿ ವೆಚ್ಚ
ಕಲ್ಮಲ – ಶಿಗ್ಗಾಂವ್​​ ರಾಜ್ಯ ಹೆದ್ದಾರಿ – 23 ಮೇಲ್ದರ್ಜೆಗೆ
ನರಗುಂದ – ಸಿಂಧನೂರು NH-150 ಕೂಡ ಮೇಲ್ದರ್ಜೆಗೆ
ಭಾನಾಪುರ ರೈಲು ಮಾರ್ಗದ ಮೇಲ್ಸೇತುವೆಗೆ 56 ಕೋಟಿ ರೂ. ಮಂಜೂರಾತಿ
ಜಿಲ್ಲಾಡಳಿತ ಭವನದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪನೆ
ಕೊಪ್ಪಳದಲ್ಲಿ ಕೇಂದ್ರಿಯ ವಿದ್ಯಾಲಯ ಕಟ್ಟಡಕ್ಕಾಗಿ 17.13 ಕೋಟಿ ರೂ. ಅನುದಾನ ರಿಲೀಸ್​

ಕ್ಷೇತ್ರದ ಪರಿಚಯ

ಜೈನ ಕಾಶಿ ಎಂದೇ ಕರೆಸಿಕೊಳ್ಳುವ ಜಿಲ್ಲೆ

ದಕ್ಷಿಣ ಭಾರತದ 2ನೇ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಗವಿ ಸಿದ್ದೇಶ್ವರ ಉತ್ಸವ

ಐತಿಹಾಸಿಕ ಸ್ಥಳಗಳ ತವರೂರು ಇಟಗಿ, ಪುರ, ಕನಕಗಿರಿ, ಆನೆಗುಂದಿ

ಭತ್ತದ ಕಣಜ ಎಂದೇ ಖ್ಯಾತಿ ಪಡೆದ ಗಂಗಾವತಿ

ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಪರ್ವತ

ಐತಿಹಾಸಿಕ ಕನಕಾಚಲಪತಿ ದೇವಸ್ಥಾನ

RELATED ARTICLES

Related Articles

TRENDING ARTICLES