Wednesday, January 15, 2025

ಸುಮಲತಾ ಮಾಯಾಂಗನೆ : ಶಿವರಾಮೇಗೌಡ

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಸಂಸದ ಶಿವರಾಮೇಗೌಡ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ, ‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗಿಂಥಾ ಮಾಯಾಂಗನೆ’ ಎಂದು ಕಿಡಿಕಾರಿದರು.
ಈ ಟೂರಿಂಗ್​ ಟಾಕೀಸ್​ಗೆ ಯಾರೂ ಮಾರು ಹೋಗಬೇಡಿ. ನಾವು ನಿಮ್ಮ ಕೆಲಸ ಮಾಡುವವರು ನಾವು. ಟೂರಿಂಗ್ ಟಾಕೀಸ್​ ಬರಲ್ಲ. ಫಿಲ್ಮ್​ ಆ್ಯಕ್ಟರ್​ಗಳನ್ನು, ಅವರು ಮಾಡಿರೋ ಪಿಕ್ಚರ್ ನೋಡೋಕೆ ಚಂದ. ಆ ಪಿಕ್ಚರ್ ಕೂಡ ಸುಮ್ಮನೇ ನೋಡಲ್ಲ. ದುಡ್ ಕೊಟ್ಟು ನೋಡ್ತೀವಿ. ಈ ಟೂರಿಂಗ್ ಟಾಕೀಸ್​ ಏಪ್ರಿಲ್​ 18ಕ್ಕೆ ಬಂದ್​ ಆಗುತ್ತೆ ಎಂದರು.

RELATED ARTICLES

Related Articles

TRENDING ARTICLES